ಸಿಲ್ವರ್ ಮರವೇರಿದ ಕಾರ್ಮಿಕ: ವಿದ್ಯುತ್ ಶಾಕ್‌ನಿಂದ ಮೃತ

0
20

ಚಿಕ್ಕಮಗಳೂರು: ಕಾಫಿತೋಟದಲ್ಲಿ ಸಿಲ್ವರ್ ಮರಗಸಿ ಮಾಡುವ ವೇಳೆ ವಿದ್ಯುತ್ ಶಾಕ್‌ನಿಂದ ಮರದಲ್ಲೆ ಕಾರ್ಮಿಕ ಸಾವನಪ್ಪಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕು ಕುನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾರ್ಮಿಕ ಚಂದ್ರಪ್ಪ (45) ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆ. ಕಾಫಿತೋಟದಲ್ಲಿ ಬೆಳೆದಿರುವ ಸಿಲ್ವರ್ ಮರಗಳು ನೇರವಾಗಿ ಬೆಳೆಯುವ ಉದ್ದೇಶದಿಂದ ಮರಗಸಿ ಮಾಡಲಾಗುತ್ತದೆ.
ಚಂದ್ರಪ್ಪ ಮರಗಸಿ ಮಾಡುವ ವೇಳೆ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಸಿಲುಕಿ ವಿದ್ಯುತ್ ಪ್ರವಹಿಸಿ ಮರದಲ್ಲೆ ಮೃತಪಟ್ಟಿದ್ದಾನೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleRCB ಆಪದ್ಬಾಂಧವನಿಗೆ 39 ರ ಸಂಭ್ರಮ: ನಿವೃತ್ತಿ ಕಾರಣ ತಿಳಿಸಿದ DK
Next articleಸಚಿವ ನಾಗೇಂದ್ರ ಬಂಧಿಸಿ, ಸಿಬಿಐ ತನಿಖೆಗೆ ವಹಿಸಲಿ