ಸಿಲಿಂಡರ್ ಸ್ಫೋಟ : ತಪ್ಪಿದ ಅನಾಹುತ

0
25

ಇಳಕಲ್ : ಮನೆಯಲ್ಲಿ ಇಟ್ಟಿದ್ದ ಸಿಲಿಂಡರ್ ಸ್ಫೊಟಗೊಂಡು ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಇಲ್ಲಿನ ಎಸ್ ಆರ್ ಕೆ ಕಾಲೋನಿಯಲ್ಲಿನ ರಾಜೇಸಾಬ ಭಾವಿಕಟ್ಟಿ ಎಂಬುವವರ ಮನೆಯ ಮೊದಲಿದ್ದ ಸಿಲಿಂಡರ್ ಖಾಲಿಯಾಗಿದ್ದರಿಂದ ಹೊಸ ಸಿಲಿಂಡರಗೆ ಅರ್ಜಿ ಹಾಕಲಾಗಿತ್ತು. ಆದರೆ ಇಂದು ಮನೆಯಲ್ಲಿ ಇದ್ದವರು ಬೇರೆಡೆ ಹೋಗಿದ್ದರಿಂದ ಕೇವಲ ಅಜ್ಜಿಯೊಬ್ಬಳು ಮಾತ್ರ ಮನೆಯಲ್ಲಿ ಇದ್ದಳು ಆ ಸಮಯದಲ್ಲಿ ವಿತರಕ ಹುಡುಗರು ಸಿಲಿಂಡರ್ ಇಳಿಸಿದ್ದರು ಅದನ್ನು ಒಲೆಗೆ ಹಚ್ಚಿರಲಿಲ್ಲ. ಸಿಲಿಂಡರ್ ಲಿಕೇಜ್ ಇದ್ದ ಕಾರಣ ಅದು ಹಾಗೇಯೇ ಗಾಳಿಯಲ್ಲಿ ಪಸರಿಸುತ್ತಾ ಹೋಗಿದೆ ಯಾವುದೇ ಕಾರಣಕ್ಕೆ ಬೆಂಕಿ ಕಡ್ಡಿ ಕೊರೆದಾಗ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಇದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಕೂಡಲೇ ಅಲ್ಲಿದ್ದ ಜನರು ಅಗ್ನಿಶಾಮಕ ದಳಕ್ಕೆ ಮೊಬೈಲ್ ಮಾಡಿದಾಗ ಅವರು ಬಂದು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಎಚ್‌ಪಿ ಗ್ಯಾಸ್ ಸೆಂಟರ್ ಮಾಲಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಇಳಕಲ್ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೋಲಿಸರು ತನಿಖೆ ನಡೆಸಿದ್ದಾರೆ.

Previous articleಥಗ್‌ ಲೈಫ್‌ಗೆ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ: ಇಷ್ಟವಿಲ್ಲ ಎಂದಾದರೆ ನೋಡಬೇಡಿ ಎಂದ ಸುಪ್ರೀಂ
Next articleಪ್ರಚಾರದ ಗೀಳಿಗೆ ಅಮಾಯಕರ ಬಲಿ