ಸಿಲಿಂಡರ್ ಸೋರಿಕೆ ನಾಲ್ವರಿಗೆ ಗಾಯ

0
18
ಸಿಲಿಂಡರ್‌

ವಿಜಯಪುರ: ಮನೆಯೊಂದರಲ್ಲಿ ಆಕಸ್ಮಿಕ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ವಿಜಯಪುರ ನಗರದ ರಾಜಾಜಿನಗರದಲ್ಲಿ ನಡೆದಿದೆ.
ಮಹಾದೇವ ದಿಂಡವಾರ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿಯೇ ಬೆಂಕಿ, ಹೊಗೆ ಮನೆಯಲ್ಲಾ ಆವರಿಸಿ ಮಹಾದೇವ, ಸಂಕೇತ, ಮಣಿಕಂಠ ರಾಮು ಎಂಬ ನಾಲ್ವರು ಕುಟುಂಬ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ಅವಘಡದಲ್ಲಿ ಮನೆಯಲ್ಲಿರುವ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

Previous articleUPSC ಪರೀಕ್ಷೆ ಮುಂದೂಡಿಕೆ
Next articleಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಲು ಜಾಗೃತರಾಗಿ