ಡಮಾಸ್ಕಸ್: ಕಳೆದ ೧೩ ವರ್ಷಗಳಿಂದ ನಾಗರಿಕ ಅಶಾಂತಿಗೆ ತುತ್ತಾಗಿರುವ ಸಿರಿಯಾದಲ್ಲಿ ಭಾನುವಾರ ಬೆಳಗ್ಗೆ ಹಯಾತ್ ತಹ್ರೀರ್ ಅಲ್ ಶಾಮ್ (ಎಚ್‌ಟಿಎಸ್) ಎನ್ನುವ ಬಂಡುಕೋರರ ಗುಂಪು ಅಲ್ಲಿನ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ, ವಶಪಡಿಸಿಕೊಂಡಿದ್ದಾರೆ. ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರ ಪತನಗೊಂಡಿದೆ.
ಎಚ್‌ಟಿಎಸ್ ಬಂಡುಕೋರರು ರಾಜ ಧಾನಿ ಡಮಾ ಸ್ಕಸ್ ಪ್ರವೇಶಿಸುತ್ತಿದ್ದಂತೆ, ಬಷರ್ ದೇಶ ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಸರ್ಕಾರ ಪತನಗೊಳ್ಳುತ್ತಿದ್ದಂತೆ ಬೆಳಗ್ಗೆಯೇ ನಗರದ ಮಸೀದಿಗಳಿಗೆ ಜನ ಧಾವಿಸಿ ಪ್ರಾರ್ಥನೆ ನಡೆಸಿದರು. ಸಂಜೆಯ ಹೊತ್ತಿಗೆ ಎಚ್‌ಟಿಎಸ್‌ನ ಮುಖ್ಯಸ್ಥ ಅಲ್ ಜೊಲಾನಿ ಡಮಾಸ್ಕಸ್‌ಗೆ ಬಂದು ಇಳಿದಿದ್ದಾರೆ.