ಚಿಕ್ಕಮಗಳೂರು: ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದ್ದ ಮಾತ್ರಕ್ಕೆ ಶ್ರೀರಾಮನ ಗುಣ ಅವರಿಗೆ ಬರಲು ಸಾಧ್ಯವಿಲ್ಲ, ಒಬ್ಬರಿಗೊಂದು ಮಾಡುವವರು ರಾಮನಿಗೆ ಸಮನಾಗಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ಎಲ್ಲರಿಗೂ ನ್ಯಾಯ ಕೊಟ್ಟವನು ಪ್ರಭು ಶ್ರೀರಾಮಚಂದ್ರ, ರಾಮನ ಹೆಸರಿಟ್ಟುಕೊಂಡ ಮಾತ್ರಕ್ಕೆ ಸಿದ್ದರಾಮಯ್ಯ ರಾಮನಿಗೆ ಸಮನಾಗಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯ ರಾಜ್ಯದ ಎಲ್ಲರಿಗೂ ನ್ಯಾಯ ಕೊಟ್ಟಿದ್ದಾರಾ, ದಲಿತರ ಹಣವನ್ನು ವಾಪಸ್ ಪಡೆದು ಅಲ್ಪಸಂಖ್ಯಾತರಿಗೆ ಕೊಟ್ಟು ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಒಂದು ಮಾಡುವವರು ಶ್ರೀರಾಮನಿಗೆ ಸಮನಾಗಲು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.
ಹೆಸರಿಟ್ಟುಕೊಂಡ ಮಾತ್ರಕ್ಕೆ ರಾಮನ ಗುಣ ಬರುವುದಿಲ್ಲ ಎಂದು ಚಾಟಿ ಬೀಸಿದ ಅವರು ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲು ಪ್ರಧಾನಿ ಮೋದಿಗೆ ಅಧಿಕಾರ ಇಲ್ಲ, ಕರಸೇವೆ ಮಾಡಿದ ನಮಗೆ ಆಹ್ವಾನ ಬಂದಿಲ್ಲ, ಕಾಂಗ್ರೆಸ್ ರಾಮಮಂದಿರ ನಿರ್ಮಾಣ ಆಗಬೇಕೆಂದು ಯಾವತ್ತು ಬಯಸಿತ್ತು ಎಂದಿದ್ದಾರೆ.
ಸಿದ್ದರಾಮಯ್ಯ ಹಾಗೂ ಎಚ್ ಆಂಜನೇಯ ಮನೆಗೆ ಮಂತ್ರಾಕ್ಷತೆ ತಲುಪುತ್ತದೆ ಲೋಕಕಲ್ಯಾಣಕ್ಕಾಗಿ ಭಾರತ ವಿಶ್ವ ಗುರು ಆಗಲಿ ಎಂದು ಅವರಿಬ್ಬರೂ ಕೂಡಾ ಪ್ರಾರ್ಥಿಸಲಿ ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಹೇಳಿದ್ದಾರೆ.
























