ಬಳ್ಳಾರಿ: ಮುಖ್ಯಂಮತ್ರಿ ಸಿದ್ದರಾಮಯ್ಯ ಕುರುಬರಿಗೆ ಮಾತ್ರ ಅನ್ನಭಾಗ್ಯ ಯೋಜನೆ ಜಾರಿ ಮಾಡಿಲ್ಲ. ರಾಜ್ಯದ ಪ್ರತಿಯೊಬ್ಬರಿಗೂ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ಬೊಮ್ಮಘಟ್ಟ ಗ್ರಾಮದಲ್ಲಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಆಡಳಿತ ಇರೋ ರಾಜ್ಯಗಳಲ್ಲಿ ಅನ್ನಭಾಗ್ಯ ಯೋಜನೆ ಇಲ್ಲ. ಸತ್ಯಕ್ಕೆ ಆಯುಷ್ಯ ಇದೆ ಸುಳ್ಳಿಗೆ ಆಯುಷ್ಯ ಇಲ್ಲ. ಜನರ ಅಭ್ಯುದಯಕ್ಕೆ ಗ್ಯಾರೆಂಟಿ ಯೋಜನೆಗಳು ಜಾರಿ ನಾವು ಸುಳ್ಳು ಹೇಳುವ ಅಗತ್ಯತೆ ಇಲ್ಲ
ಸುಳ್ಳು ಹೇಳಿ ನಾವು ಮತ ಕೇಳುವುದಿಲ್ಲ. ಗ್ಯಾರೆಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಐದು ಸಾವಿರ ಸಿಗುತ್ತಿದೆ ಎಂದರು. ಧರ್ಮ ಧರ್ಮ ಜಾತಿಗಳ ಮಧ್ಯೆ ವೈರುತ್ವ. ತರುವ ಪಕ್ಷಗಳಿವೆ ಅವುಗಳನ್ನು ಜನರು ತಿರಸ್ಕರಿಸಬೇಕು. ಎಲ್ಲಾ ಜಾತಿ ಧರ್ಮವನ್ನ ಪ್ರೀತಿಸು ಪಕ್ಷಗಳಿಗೆ ಆದ್ಯತೆ ನೀಡಬೇಕು ಎಂದರು.