ಸಿದ್ದರಾಮಯ್ಯ ಕಪ್-2025: ಪೋಸ್ಟರ್ ಬಿಡುಗಡೆ

0
35

ಬೆಂಗಳೂರು: ಚಾಂಪಿಯನ್ಸ್ ಲೀಗ್ ಸೀಸನ್ 03 – ಸಿದ್ದರಾಮಯ್ಯ ಕಪ್-2025ರ ಪೋಸ್ಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶ್ರೀ ರಾಘವೇಂದ್ರ ಯೂತ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅರಕಲಗೂಡು ಚಾಂಪಿಯನ್ಸ್ ಲೀಗ್ ಸೀಸನ್ 03 – ಸಿದ್ದರಾಮಯ್ಯ ಕಪ್-2025 ರ ಪೋಸ್ಟರ್ ಇಂದು ಬಿಡುಗಡೆಗೊಡೆಗೊಂಡಿದ್ದು ಈ ಪಂದ್ಯಾಕೂಟಕ್ಕೆ ಯಶಸ್ವಿಯಾಗಲೆಂದು ಶುಭ ಸಿಎಂ ಹಾರೈಸಿದರು. ಈ ಸಂದರ್ಭದಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಪ್ರಸನ್ನಕುಮಾರ್ ಎಸ್.ಎಸ್, ನಿವೃತ್ತ ಐ.ಎ.ಎಸ್ ಅಧಿಕಾರಿ ರಾಮೇಗೌಡ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ಪಂದ್ಯಾವಳಿಯ ಆಯೋಜಕ ಹರೀಶ್, ಮಂಜು, ಮಂಜುನಾಥ್, ದಿವಾಕರ್, ವಿಜಯ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Previous articleಖೋ ಖೋ ವಿಶ್ವಕಪ್ ವಿಜೇತರಿಗೆ ಸಿಎಂ ಸನ್ಮಾನ
Next articleಮರಳಿ ಮನೆ ಸೇರಿದ ಬಾಣಂತಿ