ಶಿಗ್ಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ತಮ್ಮ ವಿಧಾನಸಭಾ ಕ್ಷೇತ್ರ ಶಿಗ್ಗಾವಿಯ ಸರಕಾರಿ ಕನ್ನಡ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
ಮತದಾನ ಮಾಡಲು ತೆರಳುವ ಮುನ್ನ ಶಿಗ್ಗಾವಿಯ ತಡಸ್ ಕ್ರಾಸ್ ಬಳಿ ಇರುವ ಗಾಯತ್ರಿ ದೇವಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಅವರೊಂದಿಗೆ ಅವರ ಪುತ್ರ ಭರತ ಬೊಮ್ಮಾಯಿ ಹಾಗೂ ಪುತ್ರಿ ಅದಿತಿ ಬೊಮ್ಮಾಯಿ ಪಾಲ್ಗೊಂಡಿದ್ದರು.