ಸಿಎಂ ಜೊತೆಗೆ ಚರ್ಚಿಸಿದ ಬಳಿಕವೇ ʻಸಲಾಂ ಆರತಿʼ ಹೆಸರು ಬದಲಿಸುವ ತೀರ್ಮಾನ

0
23
ಶಶಿಕಲಾ ಜೊಲ್ಲೆ

ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆಗೆ ಚರ್ಚಿಸಿದ ಬಳಿಕವೇ ʻಸಲಾಂ ಆರತಿʼ ಹೆಸರು ಬದಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೆಸರು ಬದಲಿಸುವ ಬಗ್ಗೆ ಸಾಕಷ್ಟು ಮನವಿಗಳು ಬಂದಿದ್ದವು. ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಚರ್ಚಿಸಿ ಹೆಸರು ಬದಲಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಮನವಿ ಈಗ ಇಲಾಖೆಗೆ ಬಂದಿದ್ದು, ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದರು.
ಇದಕ್ಕೆಲ್ಲ 10-15 ದಿನಗಳ ಸಮಯ ಬೇಕು. ಪರಿಶೀಲನೆ ಬಳಿಕ ಅಂತಿಮವಾಗಿ ತೀರ್ಮಾನಿಸಿತ್ತೇವೆ. ಜನರ ಮನವಿ ಮೇರೆಗೆ ಪರಿಶೀಲನೆ ಮಾಡುತ್ತಿದ್ದೇವೆ ವಿನಹಃ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

Previous articleಭೂಪೇಂದ್ರ ಪಟೇಲ್‌ ಸೋಮವಾರ ಪ್ರಮಾಣ ವಚನ
Next articleಹಿಮಾ(ಚಂಚಲ)-ಸುಖ್ವಿಂದರ್ ಸಿಂಗ್ ಸುಖು ಅಚಲ?