ಸಿಎಂ ಕಾರಿಗೆ ಅಡ್ಡಿ: ರೆಡ್ಡಿ ಕಾರು ಜಪ್ತಿ

0
25

ಕೊಪ್ಪಳ: ಮುಖ್ಯಮಂತ್ರಿಗಳ ಕಾನ್ವೆ ರೂಲ್ಸ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ರೇಂಜ್ ರೋವರ್ ಕಾರನ್ನು ಗಂಗಾವತಿ ಸಂಚಾರಿ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.
ಜನಾರ್ದನ ರೆಡ್ಡಿಯವರ ರೇಂಜ್ ರೋವರ್ ಕಾರು ಸೇರಿದಂತೆ ಅವರ ಇಬ್ಬರು ಬೆಂಬಲಿಗರ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿದ ಪೊಲೀಸರು ಗಂಗಾವತಿಗೆ ತಂದಿದ್ದಾರೆ.
ಅ. 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಕ್ಕೆ ಎದುರಾಗಿ ಕಾರು ಚಾಲನೆ ಮಾಡಿದ್ದರು. ಈ ಹಿನ್ನಲೆ ಕರ್ತವ್ಯದಲ್ಲಿದ್ದ ಪೊಲೀಸರು ಮೂರು ಕಾರುಗಳ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು.

Previous articleನೂತನ ಮುಖ್ಯಮಂತ್ರಿ ಘೋಷಣೆ
Next articleಜನಗಣತಿ ಕೋಲ್ಡ್‌ ಸ್ಟೋರೆಜ್‌ನಲ್ಲಿಟ್ಟರು ಎಂದವರಿಗೆ ಈಗ ಬಿಸಿತುಪ್ಪವಾಗಿದೆ