ಸಪ್ತಪದಿ ತುಳಿದ ವೃದ್ಧರು

0
34

ಹೊನ್ನಾಳಿ: ಮದುವೆಗಳ ಬಗ್ಗೆ ನಮ್ಮ ಹಣೆಬರಹದಲ್ಲಿ ಏನು ಆಗಬೇಕೋ ಅದೇ ನಡೆಯುತ್ತದೆ ಎಂಬುದಕ್ಕೆ ತಾಲೂಕಿನ ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ಇಂತಹದ್ದೊಂದು ಮದುವೆ ನಡೆದಿರುವುದೇ ಸಾಕ್ಷಿ.
ನ್ಯಾಮತಿ ತಾಲೂಕಿನ ೬೬ ವರ್ಷದ ನಿವೃತ್ತ ಶಿಕ್ಷಕ ನಾಗರಾಜ್‌ರವರು ೫೬ ವರ್ಷದ ರುಕ್ಮಿಣಿ ಅವರನ್ನು ವಿವಾಹವಾಗಿದ್ದಾರೆ. ನಾಗರಾಜ್ ಅವರ ಪತ್ನಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಇವರ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ. ಪತ್ನಿ ಸಾವಿನ ನಂತರ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದ ಅವರು ಇನ್ನೊಂದು ಮದುವೆಯಾಗಲು ನಿರ್ಧರಿಸಿದ್ದರು. ಇತ್ತ ರುಕ್ಮಿಣಿ ಅವರು ಮದುವೆಯಾಗದೆ ಸಹೋದರನ ಆಸರೆಯಲ್ಲಿ ಜೀವನ ಸಾಗಿಸುತ್ತಿದ್ದರು. ಈ ಎರಡೂ ಕುಟುಂಬದವರು ಚರ್ಚಿಸಿ ದೇವಸ್ಥಾನದಲ್ಲಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

Previous articleಪೌರತ್ವ ಕಾಯ್ದೆ ರದ್ದು-ಯಾರಿಗೂ ಸಾಧ್ಯವಿಲ್ಲ
Next articleಐವರ ಅಸ್ಥಿಪಂಜರ ಪತ್ತೆ ಪ್ರಕರಣ: ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ