ಸದನದೊಳಗೆ ವೀರ ಸಾರ್ವಕರ ಪೋಟೋ ಏಕೆ: ಸಿದ್ದರಾಮಯ್ಯ ಪ್ರಶ್ನೆ

0
11
ಸಿದ್ದರಾಮಯ್ಯ

.
ಬೆಳಗಾವಿ: ಸದನದೊಳಗೆ ವೀರ ಸಾವರ್ಕರ್ ಭಾವಚಿತ್ರವನ್ನು ಏಕೆ ಹಾಕಲಾಗುತ್ತದೆ. ಅದರ ಅಗತ್ಯ ಇಲ್ಲ, ಇಲ್ಲಿಯವರೆಗೆ ಸದನದಲ್ಲಿ ಸಾವರ್ಕರ್ ಫೋಟೋ ಹಾಕಿಲ್ಲ, ಈಗ ಏಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ ವಿಚಾರವಾಗಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಹತ್ಯೆಯಲ್ಲಿ ವೀರ ಸಾವರ್ಕರ್ ಕೈವಾಡವಿತ್ತು. ಸದನದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ವೀರ ಸಾವರ್ಕರ್ ಮೊದಲೇ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದವರು. ಗಾಂಧೀಜಿ ಸಾವಿನಲ್ಲಿ ಸಾವರ್ಕರ್ ಕೈವಾಡವಿದೆ ಎಂದರು. ಫೋಟೋ ಅಳವಡಿಕೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ. ಈ ವಿಚಾರವನ್ನು ಸರ್ವ ಸದಸ್ಯರ ಗಮನಕ್ಕೆ ತಂದಿಲ್ಲ. ವೀರ ಸಾವರ್ಕರ್ ಗಾಂಧೀಜಿ ಕೊಲೆ ಪ್ರಕರಣದಲ್ಲಿ ​ಇರುವ ವ್ಯಕ್ತಿ ಎಂದು ಸಿದ್ದರಾಮಯ್ಯ ಹೇಳಿದರು

Previous articleಕ್ರಾಂತಿ ಆಡಿಯೋ ರಿಲೀಸ್‌ ದಾಂಧಲೆ-ಲಾಠಿ ಚಾರ್ಜ್‌
Next articleಬೆಳಗಾವಿಗೆ ಹೋಗ್ತೀನಿ ಅಧಿವೇಶನಕ್ಕೆ ಹೋಗಲ್ಲ: ಮುನಿಸು ಹೊರಹಾಕಿದ ಈಶ್ವರಪ್ಪ