ಸತ್ಸಂಗದ ವೇಳೆ ಕಾಲ್ತುಳಿತಕ್ಕೆ 27 ಕ್ಕೂ ಹೆಚ್ಚು ಸಾವು

0
10

ಲಖನೌ: ‘ಸತ್ಸಂಗ’ ಧಾರ್ಮಿಕ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 27ಕ್ಕೂ ಜನರು ಮೃತಪಟ್ಟ ಘಟನೆ ನಡೆದಿದೆ.
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಹತ್ರಾಸ್​​ ಸಿಕಂದರಾ ರಾವ್ ಪಟ್ಟಣದಲ್ಲಿ ವಿಶೇಷವಾಗಿ ಹಾಕಲಾಗಿದ್ದ ಪೆಂಡಾಲ್​ನಲ್ಲಿ ಧಾರ್ಮಿಕ ಬೋಧಕರೊಬ್ಬರು ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಶಿವನ ಸತ್ಸಂಗದ ವೇಳೆ ಕಾಲ್ತುಳಿತ ಸಂಭವಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದು ನಾನಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Previous articleಮೋದಿಗೆ ಪತ್ರ ಬರೆದ ರಾಹುಲ್‌
Next articleಸಂಸತ್ತಿನಲ್ಲಿ ಹಿಂದೂಗಳಿಗೆ ಅವಮಾನ ಎಸಗಿದ ರಾಹುಲ್ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಆಗ್ರಹ