ಸತೀಶ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ

0
16
SATISH J

ಬೆಳಗಾವಿ: ಶಾಸಕ ಸತೀಶ ಜಾರಕಿಹೊಳಿ ಭಾಷಣ ಮಾಡುತ್ತಿದ್ದ ವೇಳೆ ಮರಾಠಾ ಸಮುದಾಯದ ಕೆಲವರು ಅಡ್ಡಿಪಡಿಸಿದ ಘಟನೆ ಇಲ್ಲಿನ ಕೊಂಡಸಕೊಪ್ಪ ಪ್ರತಿಭಟನಾ ಸ್ಥಳದಲ್ಲಿ ನಡೆಯಿತು.
ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಕೇವಲ ನಾಲ್ಕು ಜನರು ವಿರೋಧ ಮಾಡಿದ್ದಾರೆ. ಕೆಲವರು ರಾಜಕೀಯವಾಗಿ ಈ ರೀತಿ ಮಾಡುತ್ತಾರೆ. ಜಿಂದಾಬಾದ್‌ ಅಂತಾ ಹೇಳಿದ್ರೆ ಮಾತ್ರ ಅವನು ಲೀಡರ್‌ ಆಗುತ್ತಾನೆ. ರಾಜಕೀಯ ಜೀವನದಲ್ಲಿ ಇದೇನು ಹೊಸದಲ್ಲ. ಇದು ಸಮುದಾಯದ ಪ್ರತಿಭಟನೆ. ನಿಪ್ಪಾಣಿ ಸಭೆ ಬೇರೆ, ಈ ಸಭೆ ಬೇರೆ. ಅತೀ ಸೂಕ್ಷ ವಿಚಾರವಿದು. ಇದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೇ, ಮರಾಠಾ ಸಮುದಾಯದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ಸದನದಲ್ಲಿ ಚರ್ಚೆ ಮಾಡಲಾಗುವುದು ಎಂದರು.

Previous articleಅಳವಂಡಿಯಲ್ಲಿ ವಿಷಪೂರಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥ
Next articleಮಂಗಳೂರು ವಿವಿ ಫಲಿತಾಂಶ ವಿಳಂಬ: ಸಿಂಡಿಕೇಟ್ ಸಭೆಗೆ ನುಗ್ಗಲು ಎಬಿವಿಪಿ ಕಾರ್ಯಕರ್ತರ ಯತ್ನ