ಸಂತ್ರಸ್ತ ಕನ್ನಡಿಗರ ರಕ್ಷಣೆಗೆ ಪಹಲ್ಗಾಮ್ ಗೆ ತೆರಳಿದ ಸಚಿವ ಸಂತೋಷ ಲಾಡ್

0
42

ಹುಬ್ಬಳ್ಳಿ : ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಂತ್ರಸ್ತರಾಗಿರುವ ಕನ್ಮಡಿಗರ ರಕ್ಷಣೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ತೆರಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಕೂಡಲೇ ತಾವು ಮತ್ತು ತಮ್ಮ ವಿಶೇಷಾಧಿಕಾರಿಗಳ ತಂಡ ಕಾಶ್ಮೀರಕ್ಕೆ ತೆರಳುತ್ತಿದ್ದು, ಸಂತ್ರಸ್ತರನ್ನು ಸುರಕ್ಷಿತವಾಗಿ ನಾಡಿಗೆ ಕರೆ ತರುತ್ತೇವೆ ಎಂದು ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಗಳವಾರ ಧಾರವಾಡದಲ್ಲಿ ಜನತಾ ದರ್ಶನ ಇಡೀ ದಿನ ನಡೆಸಿದ ಅವರು ರಾತ್ರಿ ಮುಖ್ಯಮಂತ್ರಿಯವರ ಸೂಚನೆ ಬರುತ್ತಿದ್ದಂತೆಯೇ ಕಾಶ್ಮೀರಕ್ಕೆ ಪ್ರಯಾಣಿಸಿದರು ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

Previous articleಗಣಿ ಜಿಲ್ಲೆ ಬಳ್ಳಾರಿಯ ಟಿ. ವಿಜಯಕುಮಾರ್‌ ಯುಪಿಎಸ್ ನಲ್ಲಿ 894ನೇ ‍ರ್‍ಯಾಂಕ್‌
Next articleಬೆಳ್ಳಂಬೆಳಗ್ಗೆ ಅಧಿಕಾರಿಗಳ ನಿದ್ದೆಗೆಡಿಸಿದ ಉಪಲೋಕಾಯುಕ್ತ!