ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢಮಠಕ್ಕೆ ಶಿವರಾತ್ರಿ ದಿನವಾದ ಫೆ 26 ಮತ್ತು ಜಾತ್ರೆ ನಡೆಯುವ ದಿನ ಫೆ 27 ರಂದು ಭಕ್ತರಿಗೆ ಉಚಿತ ಆಟೋ ಸೇವೆ ಯನ್ನು ಒದಗಿಸಲಾಗುತ್ತದೆ ಎಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದ್ದಾರೆ
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಮುಂಭಾಗ , ರೈಲ್ವೆ ನಿಲ್ದಾಣದ ಸುರಂಗ ಮಾರ್ಗದ ಆಟೋರಿಕ್ಷಾ ಸ್ಟ್ಯಾಂಡ್ ನಿಂದ, ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಹಳೆ ಬಸ್ ನಿಲ್ದಾಣದಿಂದ ಉಚಿತ ಆಟೋ ಸೇವೆ ಒದಗಿಸಲಾಗುತ್ತಿದೆ. ಭಕ್ತರು ಇದರ ಸದುಪಯೋಗ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.