ಶ್ರೀ ಭುವನೇಶ್ವರಿ ರಥಕ್ಕೆ ವಿಶೇಷ ಪೂಜೆ

0
30

ಶ್ರೀರಂಗಪಟ್ಟಣ: ಬೆಂಗಳೂರಿನಲ್ಲಿ ಶ್ರೀ ಭುವನೇಶ್ವರಿ ದೇವಾಲಯ ನಿರ್ಮಿಸಬೇಕೆಂಬ ಮಹಾದಾಸೆಯಿಂದ ಶ್ರೀ ಜ್ಞಾನಾಂಜನೇಯ ಸೇವಾ ಟ್ರಸ್ಟ್ ಹಾಗೂ ಕನ್ನಡನಾಡು ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಾದ್ಯಂತ ಶ್ರೀ ಭುವನೇಶ್ವರಿ ರಥದ ಮೆರವಣಿಗೆಯ ಶ್ರೀರಂಗಪಟ್ಟಣಕ್ಕೆ ಆಗಮಿಸಿ ವಿಶೇಷ ಪೂಜೆಯ ಬಳಿಕ ಇತರೆಡೆಗೆ ಪ್ರಯಾಣ ಬೆಳೆಸಿತು. ಶ್ರೀರಂಗನಾಥ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ವಿಜಯ ಸಾರಥಿ ವಿಶೇಷ ಪೂಜೆ ಸಲ್ಲಿಸಿ ಭುವನೇಶ್ವರಿ ದೇವಾಲಯ ನಿರ್ಮಾಣಕ್ಕೆ ಪ್ರಾರ್ಥನೆ ಸಲ್ಲಿಸಿದರು. ಕನ್ನಡನಾಡು ಹಿತರಕ್ಷಣಾ ಸಮಿತಿ ಸಂಸ್ಥಾಪಕ‌ ಅಧ್ಯಕ್ಷ ಕೃಷ್ಣಮೂರ್ತಿ, ರಾಜ್ಯಾಧ್ಯಕ್ಷೆ ಗೀತಾ, ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷೆ ಎನ್.ಸರಸ್ವತಿ, ಸಾವಿತ್ರಿ, ಮಂಡ್ಯ ರಕ್ಷಣಾ ವೇಧಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು, ಪತ್ರಕರ್ತರಾದ ಪುಟ್ಟಸ್ವಾಮಿ, ಗಂಜಾಂ ಮಂಜು, ಕೆ.ಜೆ.ಲೋಕೇಶ್, ಅಲ್ಲಾಪಟ್ಟಣ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Previous articleಕಾಂಗ್ರೆಸ್‌ಗೆ ಅಕ್ಕಿ ಕೊಡಲು ಆಗ್ತಿಲ್ಲ
Next articleಮಣಿಪುರಕ್ಕೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ