ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯರು ಲಿಂಗೈಕ್ಯ

0
16

ದಾವಣಗೆರೆ: ಹೊನ್ನಾಳಿ ತಾಲೂಕು ಹೊಟ್ಯಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠ ಪೀಠಾಧ್ಯಕ್ಷರಾಗಿದ್ದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ(61) ಸ್ವಾಮೀಜಿ ಲಿಂಗೈಕ್ಯರಾದರು.
ಅನಾರೋಗ್ಯ ಹಿನ್ನೆಲೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಲಿಂಗೈಕ್ಯರಾಗಿದ್ದಾರೆ. ನಾಳೆ ದಿನಾಂಕ 25ರಂದು ಮಧ್ಯಾಹ್ನ ಧಾರ್ಮಿಕ ವಿಧಿ-ವಿಧಾನ ಕಾರ್ಯ ಜರುಗಲಿದ್ದು, ಉಜ್ಜೈನಿ ಜಗದ್ಗುರುಗಳ ಅಪ್ಪಣೆ ಮೇರೆಗೆ ಶ್ರೀ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ಶಿವಾಚಾರ್ಯ ಬಳಗದ ಸಮ್ಮುಖದಲ್ಲಿ ಶ್ರೀ ಮಠದಲ್ಲಿ ಅಂತಿಮ ವಿಧಿ ವಿಧಾನ ಕಾರ್ಯ ನೆರವೇರಲಿದೆ. ನಾಳೆ ಮಧ್ಯಾಹ್ನದವರೆಗೆ ಹೊಟ್ಯಾಪುರ ಶ್ರೀಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Previous articleಕಾಂಗ್ರೆಸ್‌ ಸರ್ಕಾರ ಬೀಳಿಸಲು ವಿದೇಶದಲ್ಲಿ ಷಡ್ಯಂತ್ರ
Next articleಮಳೆಗೆ ಮಾಯವಾದ ಬಾವಿ