Home Advertisement
Home ತಾಜಾ ಸುದ್ದಿ ಶೆಟ್ಟರ, ಸವದಿಯನ್ನು ಚುನಾವಣೆಯಲ್ಲಿ ಕಟ್ಟಿ ಹಾಕಲು ರಣ ತಂತ್ರ

ಶೆಟ್ಟರ, ಸವದಿಯನ್ನು ಚುನಾವಣೆಯಲ್ಲಿ ಕಟ್ಟಿ ಹಾಕಲು ರಣ ತಂತ್ರ

0
116

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ ಶೆಟ್ಟರ ಈ ದಿನ ಹು- ಧಾ ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದರೆ, ಇದೇ ಹೊತ್ತಿಗೆ ಶಾಸಕ ಅರವಿಂದ ಬೆಲ್ಲದ ಮನೆಯಲ್ಲಿ ಉಪಹಾರ ಸೇವನೆ ನೆಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ಶೆಟ್ಟರ್, ಲಕ್ಣ್ಮಣ ಸವದಿ ಅವರನ್ನು ಹೇಗೆ ಚುನಾವಣೆಯಲ್ಲಿ ಕಟ್ಟಿಹಾಕಬೇಕು ಎಂಬ ಬಗ್ಗೆ ಗಂಭೀರ ಸಭೆ ನಡೆಸಿದರು.
ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಗೋವಿಂದ ಕಾರಜೋಳ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಇದ್ದರು.

ಕಳೆದ ರಾತ್ರಿಯಷ್ಟೇ ಇಲ್ಲಿನ ಕ್ಯುಬಿಕ್ ಹೊಟೇಲ್ ನಲ್ಲಿ ಸುದೀರ್ಘ ಸಭೆ ನಡೆಸಿ ಪಕ್ಷದ ಮುಖಂಡರಿಗೆ, ಪದಾಧಿಕಾರಿಗಳ ಸಭೆ ನಡೆಸಿ ಪಕ್ಷ ಮುಖ್ಯ ವ್ಯಕ್ತಿ ಅಲ್ಲ ಎಂಬ ಸಂದೇಶ ನೀಡುವ ಮೂಲಕ ಎಚ್ಚರಿಕೆ ನೀಡಿ ಅಭ್ಯರ್ಥಿಗಳ ಪರ ಸಕ್ರಿಯರಾಗಿ ಕೆಲಸ ಮಾಡಿ ಎಂದು ಫರ್ಮಾನು ಹೊರಡಿಸಿದ್ದರು.
ಮತ್ತೆ ಬೆಳಿಗ್ಗೆ ಉಪಹಾರ ಸಭೆ ನಡೆಸಿ ಸುಧೀರ್ಘ ಸಮಾಲೋಚನೆ ನಡೆಸಿದ್ದಾರೆ.

ನಡ್ಡಾ ಟೆಂಪನ್ ರನ್ : ಸಭೆ ಬಳಿಕ ನಡ್ಡಾ ಅವರು ನಗರದ ಶ್ರೀ ಸಿದ್ಧಾರೂಢಮಠ, ಮೂರುಸಾವಿರಮಠಕ್ಕೆ ಭೇಟಿ ನೀಡಿದರ ಬಳಿಕ ಶಿಗ್ಗಾವಿಗೆ ಮುಖ್ಯಮಂತ್ರಿ ನಾಮಪತ್ರ ಸಲ್ಲಿಕೆಗೆ ತೆರಳಿದರು.

Previous articleಬಿಜೆಪಿಯ ಮತ್ತೋರ್ವ ನಾಯಕ ರಾಜೀನಾಮೆ
Next articleಬಿಜೆಪಿ ಮುಖಂಡನ ಹತ್ಯೆ