ಶಾಸ್ತ್ರೀಯ ಗಾಯಕ ಪಂಡಿತ್ ಪ್ರಭಾಕರ್ ಕಾರೇಕರ್ ನಿಧನ

0
58

ಮರಾಠಿ ನಾಟ್ಯ ಗೀತೆಗಳ ಗಾಯನಕ್ಕೆ ಕಾರೇಕರ್‌ ಪ್ರಸಿದ್ದರಾಗಿದ್ದಾರೆ

ಮುಂಬೈ: ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ಪ್ರಭಾಕರ್ ಕಾರೇಕರ್ ಮುಂಬೈನಲ್ಲಿ ನಿಧನರಾಗಿದ್ದಾರೆ.
ಅಲ್ಪಕಾಲದ ಅನಾರೋಗ್ಯದ ನಂತರ ಅವರು 80 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಗೋವಾ ಮೂಲದ ಪ್ರಭಾಕರ್ ಕಾರೇಕರ್ ಅವರ ಕುಟುಂಬವು ಬುಧವಾರ ರಾತ್ರಿ ಶಿವಾಜಿ ಪಾರ್ಕ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ತಿಳಿಸಿದೆ. “ಬೋಲಾವಾ ವಿಠ್ಠಲ ಪಹಾವಾ ವಿಠ್ಠಲ” ಮತ್ತು “ವಕ್ರತುಂಡ ಮಹಾಕಾಯ” ನಂತಹ ಗಾಯನಕ್ಕೆ ಕಾರೇಕರ್ ಹೆಸರುವಾಸಿಯಾಗಿದ್ದರು. ಅತ್ಯುತ್ತಮ ಗಾಯಕ ಮತ್ತು ಶಿಕ್ಷಕರಾಗಿ ಗೌರವಿಸಲ್ಪಟ್ಟ ಕಾರೇಕರ್, ಆಲ್ ಇಂಡಿಯಾ ರೇಡಿಯೋ (AIR) ಮತ್ತು ದೂರದರ್ಶನದಲ್ಲಿ ಶ್ರೇಣೀಕೃತ ಕಲಾವಿದರಾಗಿ ಪ್ರದರ್ಶನ ನೀಡುತ್ತಿದ್ದರು. ಪಂಡಿತ್ ಸುರೇಶ್ ಹಲ್ದಂಕರ್, ಪಂಡಿತ್ ಜಿತೇಂದ್ರ ಅಭಿಷೇಕಿ ಮತ್ತು ಪಂಡಿತ್ ಸಿಆರ್ ವ್ಯಾಸ್ ಅವರಂತಹ ಮಹಾನ್‌ ಕಲಾವಿದರಿಂದ ತರಬೇತಿ ಪಡೆದಿದ್ದರು.

Previous articleವಿಜಯಪುರ: ಕೊಲೆ ಆರೋಪಿ ಕಾಲಿಗೆ ಗುಂಡೇಟು
Next articleರತ್ನಮಾನಸದ ಕಾಶ್ಮಿರ್ ಮಿನೆಜಸ್ ಇನ್ನಿಲ್ಲ