ಶಾರ್ಟ್ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ

0
9

ಕುಷ್ಟಗಿ:‌ಕುಷ್ಟಗಿ ತಾಲೂಕಿನ ಯರಗೇರಾ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ನಗದು, ಆಭರಣ, ದಾಖಲೆಗಳು ಧಾನ್ಯ ಬಟ್ಟೆ ಬರೆ ಸುಟ್ಟು ಕರಕಲಾಗಿದ್ದು ಅಪಾರ‌ ಪ್ರಮಾಣದಲ್ಲಿ ಹಾನಿ‌ ಸಂಭವಿಸಿದೆ. ದೊಡ್ಡಪ್ಪ ಗಚ್ಚಿನಮನಿ ಎಂಬುವವರಿಗೆ ಸೇರಿದ ಮನೆ ಇದಾಗಿದೆ. .ಮನೆಯಲ್ಲಿದ್ದ ೧೫ ತೊಲೆ ಬಂಗಾರ ೮ ಲಕ್ಷ ರೂ ಹಣ ಸೇರಿದಂತೆ ದವಸ ಧಾನ್ಯಗಳು ಬೆಂಕಿಯ ಕಣ್ಣಾಲೆಗೆ ಸುಟ್ಟು ಬಸ್ಮವಾಗಿದೆ.

ಮನೆಗೆ ರಾತ್ರಿ ಏಕಾಏಕಿಯಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯ ಮೇಲ್ಚಾವಣಿಯ (ಜಂತಿನಮನೆ)ಕಟ್ಟಿಗೆಯ ತೊಲೆಗೆ ಬೆಂಕಿ ಹತ್ತಿಕೊಂಡು ದಗದಗನೇ ಉರಿದಿದ್ದು.ಗ್ರಾಮಸ್ಥರು ಬೆಂಕಿಯನ್ನು ನಂದಿಸುವಲ್ಲಿ ಅರಸಾಹಸ ಪಟ್ಟರು ಸಹ ಯಾವುದೇ ಪ್ರಯೋಜನವಾಗಿಲ್ಲ.ತಕ್ಷಣ ಅಗ್ನಿಶಾಮಕ ಠಾಣೆಗೆ ದೊಡ್ಡಪ್ಪ ಗಚ್ಚಿನಮನೆ ದೂರವಾಣಿ ಮೂಲಕ ಮಾಹಿತಿ ನೀಡುತ್ತಿದ್ದಂತೆ ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಅವರ ನೇತೃತ್ವದಲ್ಲಿ ಅಗ್ನಿಶಾಮಕ ವಾಹನ ಸೇರದಂತೆ ಸಿಬ್ಬಂದಿಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿದ ಸ್ಥಳಕ್ಕೆ ತೆರಳಿ ಒಂದು ತಾಸು ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಬೆಲೆ ಬಾಳುವ ವಸ್ತು ಬೆಂಕಿಗೆ ಬಸ್ಮ: ಯರಗೇರಾ ಗ್ರಾಮದ ದೊಡ್ಡಪ್ಪ ಅವರಿಗೆ ಸೇರಿದ ಮನೆಯಲ್ಲಿ ಇದ್ದಂತಹ ಬಂಗಾರದ ಆಭರಣಗಳು,ಹಣ,ಬಟ್ಟೆ,ದವಸಧಾನ್ಯ, ಬಂಡೆ ಸಾಮಾನ ಸೇರಿದಂತೆ ಮನೆಯಲ್ಲಿದ್ದಂತಹ ಎಲ್ಲಾ ಸಾಮಾನುಗಳು ಹುಟ್ಟು ಬಸ್ಮವಾಗಿದ್ದು ಕಂಡು ಬಂದಿದೆ.

ತಪ್ಪಿದ ಭಾರಿ ಅನಾಹುತ: ಸೋಮವಾರ ರಾತ್ರಿ ಏಕಾಏಕಿಯಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ದಗದಗನೆ ಉರಿಯುತ್ತಿರುವುದನ್ನು ಗಮನಿಸಿದ ದೊಡ್ಡಪ್ಪ ಅವರು ಮನೆಯಲ್ಲಿ ಇದ್ದಂತಹ ಎಲ್ಲಾ ಜನರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಮನೆಯಲ್ಲಿ ಇದ್ದಂತಹ ಸಿಲಿಂಡರನ್ನು ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಮತ್ತು ಸಿಬ್ಬಂದಿಗಳು ಜೀವದ ಅಂಗವನ್ನು ತೊರೆದು ಮನೆ ಒಳಗಡೆಗೆ ಹೋಗಿ ಸಿಲೆಂಡರನ್ನು ಹೊರತಂದಿದ್ದಾರೆ ಇದರಿಂದಾಗಿ ಬಾರಿ ಅನಾಹುತ ತಪ್ಪೇದಂತಾಗಿದೆ. ಈ ಘಟನೆ ಕುರಿತು ಕುಷ್ಟಗಿ ಅಗ್ನಿಶಾಮಕ ಠಾಣೆ ಮತ್ತು ಹನಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಂದೇ ಭಾರತ ಎಕ್ಸಪ್ರೆಸ್ ಟ್ರೇನ್ ಸಂಚಾರ: ಟ್ರೇನ್ ಟಿಕೆಟ್ ದರ ಬಲು ಭಾರ”
Next articleಪುಟಿನ್‌ಗೆ ಭಸ್ಮಾಸುರ ಕಾಟ ಮೋಹಿನಿಗಾಗಿ ಹುಡುಕಾಟ