ದಾವಣಗೆರೆ: ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಎಸ್.ಎಸ್.ಬಡಾವಣೆ ರಿಂಗ್ ರಸ್ತೆಯ ಆಫೀರ‍್ಸ್ ಕ್ಲಬ್ ಸಮೀಪ ಗುರುವಾರ ಬೆಳಗಿನ ಜಾವ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಮಹಾಂತೇಶ್ ಪುಟ್ಟಪ್ಪ ಚೌರದ (೩೫) ಹತ್ಯೆಯಾದ ವ್ಯಕ್ತಿ. ಹತ್ಯೆಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ.
ಪತ್ನಿಯ ತವರು ಮನೆಯಾದ ದಾವಣಗೆರೆಯ ಬುದ್ಧ ಬಸವ ನಗರಕ್ಕೆ ಆಗಾಗ ಬರುತ್ತಿದ್ದ. ಆತ ಮದ್ಯ ವ್ಯಸನಿಯಾಗಿದ್ದು, ಅದೇ ರೀತಿ ಯುಗಾದಿ ಹಬ್ಬಕ್ಕೆ ಬಂದು ಆತ ಹತ್ಯೆಯಾಗಿ ಪತ್ತೆಯಾಗಿದ್ದಾನೆ. ಮೃತನ ಪ್ಯಾಂಟ್ ಜೇಬಿನಲ್ಲಿ ರೈಲ್ವೆ ಟಿಕೆಟ್ಪ ಪತ್ತೆಯಾಗಿದ್ದು, ಸ್ಥಳಕ್ಕೆ ವಿದ್ಯಾನಗರ ಪಿಎಸ್‌ಐ ರೂಪ ತೆಂಬದ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಪತ್ತೆಗಾಗಿ ಶಾಮನೂರು ರಸ್ತೆಯ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಯುತ್ತಿದೆ. ಅಲ್ಲದೇ, ಈತ ಸಣ್ಣಪುಟ್ಟ ಕಳ್ಳತನ ಮಾಡಿದ್ದು, ಆತನ ವಿರುದ್ಧ ಹಾವೇರಿ ಪೊಲೀಸ್ ಠಾಣೆಯಲ್ಲಿ ೧೦೯ರಡಿ ಒಂದು ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.