ಇಳಕಲ್: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಶನಿವಾರದಂದು ಇಲ್ಲಿನ ಐತಿಹಾಸಿಕ ದೇವಸ್ಥಾನವಾದ ಲಕ್ಷ್ಮೀ ವೆಂಕಟೇಶ ಗುಡಿಗೆ ಭೇಟಿ ನೀಡಿ ದರ್ಶನ ಪಡೆದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಪದಾಧಿಕಾರಿಗಳಾದ ಸುಧಾಕರಬಾಬು ,ಹಿರಣ್ಣಯ್ಯ , ಕಾರ್ತಿಕ ಬಾಪಟ್ ಮತ್ತು ನಗರದ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ ಮತ್ತು ಸಮಾಜದ ಬಾಂಧವರು ವಿಶೇಷ ಆರತಿ ಮಾಡಿಸಿ ದರ್ಶನ ಮಾಡಿದರು. ಅರ್ಚಕ ನರಸಿಂಹ ಪೂಜಾರಿ ಮತ್ತು ಸಂಗಡಿಗರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.