ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಸೇತುವೆ ಉದ್ಘಾಟನೆ

ಕಾಶ್ಮೀರ: ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಇಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಅವರು ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಅವಧಿಯನ್ನು 2-3 ಗಂಟೆ ಕಡಿತಗೊಳಿಸಿ 3 ಗಂಟೆಗೆ ಸೀಮಿತಗೊಳಿಸಲು ನೆರವಾಗಲಿರುವ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು, ಈ ಸೇತುವೆ ನದಿಮಟ್ಟದಿಂದ 359 ಮೀಟರ್ ಎತ್ತರವಿದ್ದು, 1,315 ಮೀಟರ್ ಉದ್ದವಿದೆ. ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ, ಚೆನಾಬ್ ನದಿ ಮೇಲೆ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯ ಭಾಗವಾಗಿದೆ. ಭೂಕಂಪ ಸಂಭವಿಸಿದರೂ ಏನೂ ತೊಂದರೆಯಾಗದಂತೆ ಇದನ್ನು ನಿರ್ಮಿಸಲಾಗಿದೆ. ಎತ್ತರ 1,179 ಅಡಿ, ಉದ್ದ -1,315 ಮೀ, ಉಕ್ಕು-28,000+ ಟನ್‌, ವೆಚ್ಚ 1,486 ಕೋಟಿ ರೂ. ತಗುಲಿದೆ. ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುವಲ್ಲಿ ಸೇತುವೆಯ ಪ್ರಮುಖ ಪರಿಣಾಮ ಬೀರುತ್ತದೆ.