ವಿಶ್ವಕಪ್‌ ಕ್ರಿಕೆಟ್: ಭಾರತ ಫೈನಲ್‌ಗೆ

0
15

ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್‌ ವಿರುದ್ಧ 70 ರನ್‌ಗಳ ಗೆಲುವಿನೊಂದಿಗೆ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದೆ.
ಭಾರತ ನೀಡಿದ್ದ 398 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ 48.5 ಓವರ್‌ಗಳಲ್ಲಿ 327 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ಭಾರತದ ಪರ ಮೊಹಮ್ಮದ ಶಮಿ 57ರನ್‌ ನೀಡಿ 7ವಿಕೆಟ್‌ ಪಡೆದರು. ಇದಕ್ಕೂ ಮೊದಲು ಬ್ಯಾಟ ಮಾಡಿದ ಭಾರತ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 397 ರನ್‌ ಗಳಿಸಿತ್ತು. ಭಾರತದ ಪರ ಕೊಹ್ಲಿ 117 ರನ್‌, ಶ್ರೇಯಸ್‌ ಅಯ್ಯರ್‌ 105 ರನ್‌ಗಳಿಸಿದರು.

Previous articleಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್‌ಗೆ
Next articleಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 40% ಅನುಷ್ಠಾನ