ವಿನಯ್ ಕುಲಕರ್ಣಿ ಇನ್ನೂ ಯಾಕೆ ಅರೆಸ್ಟ್ ಆಗಿಲ್ಲ?

0
34

ಈ ಸರ್ಕಾರ ತಮಗೊಂದು ನ್ಯಾಯ, ನಮಗೊಂದು ನ್ಯಾಯ ಮಾಡ್ತಿದೆ,

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ತನ್ನ ಶಾಸಕರಿಗೆ ಒಂದು ಬಗೆಯ ನೀತಿ ಬಿಜೆಪಿ ಶಾಸಕರಿಗೆ ಮತ್ತೊಂದು ಬಗೆಯ ನೀತಿ ಅನುಸರಿಸಿ ತಾರತಮ್ಯ ಧೋರಣೆ ಪ್ರದರ್ಶಿಸುತ್ತಿದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಹೇಳಿದ್ದಾರೆ, ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮಹಿಳೆಯೊಬ್ಬರು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ದೂರು ನೀಡಿದ ಬಳಿಕ ಎಫ್ಐಅರ್ ದಾಖಲಾದರೂ ಅವರನ್ನು ಬಂಧಿಸಿಲ್ಲ ಆದರೆ ಮತ್ತೊಬ್ಬ ಮಹಿಳೆ ಅಂಥದ್ದೇ ದೂರನ್ನು ಬಿಜೆಪಿ ಶಾಸಕ ಮುನಿರತ್ನ ಮೇಲೆ ನೀಡಿದಾಗ ಅವರನ್ನು ತಕ್ಷಣ ಬಂಧಿಸಿದ ಈ ಸರ್ಕಾರ ವಿನಯ್ ಕುಲಕರ್ಣಿಗೆ ಯಾಕೆ ಬಂಧಿಸಿಲ್ಲ? ವಿನಯ್ ಕುಲಕರ್ಣಿ ವಿರುದ್ಧವೂ ಅತ್ಯಾಚಾರ ಆರೋಪ ಇದೆ, ಯಾಕೆ ಬಂಧಿಸ್ತಿಲ್ಲ? ಈ ಸರ್ಕಾರ ತಮಗೊಂದು, ನಮಗೊಂದು ನ್ಯಾಯ ಕೊಡ್ತಿದೆ, ಎಸ್ಐಟಿ ಮೂಲಕ ನಾಗೇಂದ್ರಗ ಕ್ಲೀನ್‌ಚಿಟ್ ಕೊಟ್ಟಿದ್ದೀರಿ. ಈಗ ಎಸ್ಐಟಿಗೆ ಕೋವಿಡ್ ಅಕ್ರಮ ಕೊಡ್ತಿದ್ದೀರಿ. ಈ ಎಸ್ಐಟಿ ಹಿಂದಿನ ಆರೋಗ್ಯ ಸಚಿವ ಸುಧಾಕರ್ ವಿಚಾರದಲ್ಲಿ ಏನು ತೀರ್ಮಾನ ತಗೊಳ್ಳುತ್ತಾರೋ ಅಂತ ಕಾದು ನೋಡ್ತೇವೆ. ನಾಗೇಂದ್ರಗೆ ಕ್ಲೀನ್‌ಚಿಟ್ ಕೊಟ್ಟ ಎಸ್ಐಟಿ ಸುಧಾಕರ್ ವಿಷಯದಲ್ಲಿ ಯಾವ ನಡೆ ಇಡುತ್ತೆ ನೋಡೋಣ ಎಂದರು. ಕೋವಿಡ್ ಬಗ್ಗೆ ತನಿಖೆ ‌ಮಾಡಿ, ನಮ್ಮ ವಿರೋಧ ಇಲ್ಲ. ಆದರೆ ಈ ನೆಪದಲ್ಲಿ ದ್ವೇಷದ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

Previous articleದಕ್ಷಿಣ ಕೊರಿಯಾದ ಹಾನ್‌ ಕಾಂಗ್‌ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್
Next articleಬೈಕ್ ಮುಖಾಮುಖಿ ಡಿಕ್ಕಿ ಸವಾರರಿಬ್ಬರ ಸಾವು