Home Advertisement
Home ಅಪರಾಧ ವಿದ್ಯಾರ್ಥಿನಿ ಆತ್ಮಹತ್ಯೆ

ವಿದ್ಯಾರ್ಥಿನಿ ಆತ್ಮಹತ್ಯೆ

0
117
ಆತ್ಮಹತ್ಯೆ

ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ನವನಗರದ ಪ್ರಜಾನಗರದಲ್ಲಿ ನಡೆದಿದೆ.
ಬಿಸಿಎ ಓದುತ್ತಿದ್ದ ಸಂಜನಾ ಕೆಲೂಡಿ(19) ಎಂಬ ಯುವತಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಕೆಲ ವರ್ಷಗಳ ಹಿಂದಷ್ಟೇ ಈಕೆ ತಂದೆ ಕೂಡ ತೀರಿಕೊಂಡಿದ್ದಾರೆ. ಮನೆಯಲ್ಲಿ ತಾಯಿ ಹಾಗೂ ತಮ್ಮನೊಂದಿಗೆ ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ.
ಘಟನೆಗೆ ಕಾರಣವೇನೆಂದು ತಿಳಿದು ಬರಬೇಕಿದೆ. ಈ ಕುರಿತಂತೆ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.