ವಿಡಿಯೋ: ಹಳಿ ತಪ್ಪಿದ ಗೂಡ್ಸ್ ರೈಲಿನ ವ್ಯಾಗನ್‌ಗಳು

0
30

ದೆಹಲಿ : ದೆಹಲಿಯ ಜಖೀರಾ ಮೇಲ್ಸೇತುವೆ ಬಳಿ ಶನಿವಾರ ಗೂಡ್ಸ್ ರೈಲಿನ ಎಂಟು ವ್ಯಾಗನ್‌ಗಳು ಹಳಿತಪ್ಪಿದ ಘಟನೆ ನಡೆದಿದೆ.
ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಟಿ) ಪಟೇಲ್ ನಗರ ಮತ್ತು ದಯಾಬಸ್ತಿ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿವೆ. ರೈಲ್ವೆ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದವು. ಗೂಡ್ಸ್ ರೈಲಿನಲ್ಲಿ ಕಬ್ಬಿಣದ ಹಾಳೆಗಳ ರೋಲ್‌ಗಳನ್ನು ತುಂಬಿಸಲಾಗಿತ್ತು. ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಗೂಡ್ಸ್ ರೈಲಿನ ಹಳಿತಪ್ಪಿದ ಬೋಗಿಗಳನ್ನು ನೇರಗೊಳಿಸುವಲ್ಲಿ ರೈಲ್ವೆ ತಂಡಗಳು ನಿರತವಾಗಿವೆ. ಟ್ರ್ಯಾಕ್ ದುರಸ್ತಿ ಕೂಡ ನಡೆಯುತ್ತಿದೆ.

Previous articleಕಂಬಳ ಕೇವಲ ಕ್ರೀಡೆಯಲ್ಲ…
Next articleಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷರಾಗಿ ಕಾಶಪ್ಪನವರ ನೇಮಕ