ವಿಜಯಪುರ: ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ

0
39

ವಿಜಯಪುರ: ವಾರ್ಡ್‌ ನಂ.29ಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಗಿರೀಶ ಬಿರಾದಾರ ಆಯ್ಕೆಯಾಗಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್‌ ನಂ.29ಕ್ಕೆ ನಡೆದ ಉಪ ಚುನಾವಣೆಯಲ್ಲಿ ಗಿರೀಶ ಬಿರಾದಾರ ಅವರು 2754 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಭಾಗಪ್ಪ ಏಳಗಂಟಿ 1762 ಮತಗಳನ್ನು ಪಡೆದಿದ್ದರೆ. 38 ನೋಟಾ ಮತಗಳು ಚಲಾವಣೆಯಾಗಿವೆ, ಬಿಜೆಪಿಯ ವಿಜಯಕುಮಾರ ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕಾರಣಕ್ಕೆ ಉಪಚುನಾವಣೆ ನಡೆದಿತ್ತು.

Previous articleಫಲಿತಾಂಶ ಸಂಘಟನಾ ಶಕ್ತಿಯನ್ನು ಅಳೆಯುವ ಅಳತೆಗೋಲಲ್ಲ
Next articleಪಿಎಫ್ ಹಣ ಯಾಕೆ ಬಾಕಿ ಉಳಿಸಿಕೊಂಡಿದ್ದೀರಿ?