ವಿಚ್ಛೇದನ ಪಡೆದ ಪತ್ನಿ ಕೊಲ್ಲಲು ಸಂಚು ರೂಪಿಸಿದ್ದ ಮಾಜಿ ಪತಿ ಅರೆಸ್ಟ್ !

0
23
ಬಂಧನ


ಚಿಕ್ಕೋಡಿ: ವಿಚ್ಛೇದನ ಪಡೆದಿದ್ದ ತನ್ನ ಪತ್ನಿಯ ಹತ್ಯೆಗೆ ಸಂಚು ರೂಪಿಸಿ ನಾಡಪಿಸ್ತೂಲ್ ತಂದಿದ್ದ ಮಾಜಿ ಪತಿ ಮಹಾಶಯನನ್ನು ಮೀರಜ್‌ನ ಗಾಂಧಿಗಂಜ್ ಠಾಣೆ ಪೊಲೀಸರು ಮೀರಜ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬಂಧಿಸಿ ಮುಂದಾಗಬೇಕಿದ್ದ ಅನಾಹುತ ತಪ್ಪಿಸಿದ್ದಾರೆ.
ಸಚಿನ್ ಬಾಬಾಸಾಹೇಬ್ ರಾಯಮಾನೆ (೨೬) ಬಂಧಿತ ಆರೋಪಿ. ಪತ್ನಿಗೆ ಬೇರೆಯವರ ಜೊತೆಗೆ ಅಕ್ರಮ ಸಂಬAಧವಿದೆ ಎಂಬ ಸಂಶಯದಿAದ ಸಚಿನ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಹರ್ಷಿತಾ ೧೫ ದಿನಗಳ ಹಿಂದಷ್ಟೆ ಡಿವೋರ್ಸ್ ಪಡೆದಿದ್ದರು. ಇದರಿಂದ ರೋಸಿಹೋಗಿದ್ದ ಸಚಿನ್ ಆಕೆಯನ್ನು ಕೊಲ್ಲಲು ಸಂಚು ರೂಪಿಸಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪ್ಪವಾಡ ಗ್ರಾಮದಲ್ಲಿ ನಾಡಪಿಸ್ತೂಲ್ ಖರೀದಿಸಿದ್ದ. ಮೀರಜ್ ರೈಲು ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ತಿರುಗುತ್ತಿದ್ದ ವೇಳೆ ಸಂಶಯ ಬಂದ ಪೊಲೀಸರು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದು, ನಾಡಪಿಸ್ತೂಲ್ ಇರುವುದು ಪತ್ತೆಯಾಗಿದೆ. ಠಾಣೆಗೆ ಕರೆದೊಯ್ದ ಪೊಲೀಸರು ತಮ್ಮದೆ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಪತ್ನಿಯ ಹತ್ಯೆಯ ಸಂಚು ರೂಪಿಸಿದ್ದನ್ನು ಬಾಯ್ಬಿಟ್ಟಿದ್ದಾನೆ.
ಸಚಿನ್ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿ. ಸಚಿನ್‌ನಿಂದ ವಿಚ್ಛೇದನ ಪಡೆದ ಹರ್ಷಿತಾ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಚಿನ್‌ನಿಂದ ನನಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಹಾಗೂ ತನ್ನ ಜೀವಕ್ಕೆ ಏನಾದರೂ ಆದರೆ ಮಾತಿ ಪತಿ ಸಚಿನ್ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣ ಸಂಬAಧ ಮೀರಜ್‌ನ ಗಾಂಧಿ ಚೌಕ್ ಹಾಗೂ ಚಿಕ್ಕೋಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Previous articleಸ್ವಂತ ಬಾವಿಯಿಂದ ಊರಿಗೆಲ್ಲ ನೀರು: ಅಕ್ಷಯ ಪಾತ್ರೆಯಾದ ಬಾವಿ
Next articleಶಾಮನೂರು ಏನೇ ಹೇಳಿದರೂ ನನಗದು ಆಶೀರ್ವಾದವಿದ್ದಂತೆ