ವಾರ್ಷಿಕೋತ್ಸವ ಆಚರಿಸಿದ ಕಲಬುರಗಿ ವಂದೇ ಭಾರತ್

0
16

ಕಲಬುರಗಿ: ಕಲಬುರಗಿ-ಬೆಂಗಳೂರು (22231) ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ವಾರ್ಷಿಕೋತ್ಸವವನ್ನು ಕಲ್ಯಾಣ್ ಕರ್ನಾಟಕ ರೈಲು ಬಳಕೆದಾರರು ಮಾರ್ಚ್ 12 ರಂದು ನಡೆಸಿದರು.
ಲೋಕೋ ಪೈಲಟ್‌ಗಳು ಮತ್ತು ಸಿಬ್ಬಂದಿಯನ್ನು ಅವರ ಸೇವೆಗಾಗಿ ಈ ಸಂದರ್ಭದಲ್ಲಿ ಗೌರವಿಸಲಾಯಿತು, ಕಲಬುರಗಿಯಿಂದ ಶೇ.80ರಷ್ಟು ಪ್ರಯಾಣಿಕರ ಭರ್ತಿಯೊಂದಿಗೆ ಬೆಂಗಳೂರು ತೆರಳಿದರೆ, ಬೆಂಗಳೂರಿನಿಂದ ಶೇ.85ಕ್ಕಿಂತ ಹೆಚ್ಚಿನ ಜನರು ಓಡಾಟ ನಡೆಸುತ್ತಿದ್ದಾರೆ. ದೇಶದ ಇತರೆ ವಂದೇ ಭಾರತ್‌ ರೈಲುಗಳ ಪಟ್ಟಿಯಲ್ಲಿ ಉತ್ತಮ ಆದಾಯದ ಸರಾಸರಿ ಉಳಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಬುರಗಿಯಿಂದ ಬೆಂಗಳೂರಿಗೆ ತೆರಳಲು ಒಂದು ರೈಲು ಕೂಡಇರಲಿಲ್ಲ. ಕಳೆದ ವರ್ಷ ಮಾ.12ರಂದು ಆರಂಭವಾದ ವಂದೇ ಭಾರತ್‌ ರೈಲು ಇಲ್ಲಿಂದ ಆರಂಭವಾದ ಮೊದಲ ರೈಲು ಎಂಬ ಹಿರಿಮೆಗೆ ಪಾತ್ರವಾಗಿದೆ.

Previous articleಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಸಂಚಾರ ಭಾಗಶಃ ರದ್ದತಿ ಮುಂದುವರಿಕೆ
Next articleಕೇಂದ್ರ ಸರ್ಕಾರದ ನಡೆ ಮುಲಾಜಿಲ್ಲದೆ ಖಂಡಿಸುತ್ತೇವೆ