ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿರಮ್ಮನ ಬೆಟ್ಟಕ್ಕೆ ಭಕ್ತರ ದಂಡು

0
29

ಚಿಕ್ಕಮಗಳೂರು: ನರಕ ಚತುರ್ದಶಿ ದಿನ ಮಾತ್ರ ದರ್ಶನ ಕೊಡುವ ಮಲ್ಲೇನಹಳ್ಳಿಯ ಬೆಟ್ಟದ ತುದಿಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಬಿಂಡಿಗಾ ದೇವಿರಮ್ಮನ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಭಾನುವಾರ ಆಗಮಿಸಿದ್ದರು.
3 ಸಾವಿರ ಅಡಿಗಳ ಅಡಿ ಎತ್ತರವಿರುವ ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮನ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ರಾತ್ರಿಯಿಂದಲೇ ದೇವಿಯ ದರ್ಶನಕ್ಕಾಗಿ ಬರಿಗಾಲಲ್ಲೇ ಬೆಟ್ಟ ಹತ್ತಿ ಬರುತ್ತಿದ್ದಾರೆ. ಸುಮಾರು 50 ಸಾವಿರ ಜನ ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ದೀಪಾವಳಿ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಬಂದೊಬಸ್ತ್ ಮಾಡಲಾಗಿದೆ.

Previous articleಟವರ್‌ ಏರಿದ ಬಾಲಕಿ: ಕೆಳಗಿಳಿಯುವಂತೆ ಮನವಿ ಮಾಡಿದ ಮೋದಿ
Next articleವಿಜಯೇಂದ್ರ ಆಯ್ಕೆ: ಯುವ ನಾಯಕತ್ವಕ್ಕೆ ಹೈಕಮಾಂಡ್ ನೀಡಿದ ಮನ್ನಣೆ