Home ತಾಜಾ ಸುದ್ದಿ ವಕ್ಫ್ ಇಡೀ ದೇಶಕ್ಕೆ ಕ್ಯಾನ್ಸರ್ ಇದ್ದಂತೆ: ಗುಡುಗಿದ ಯತ್ನಾಳ್…!

ವಕ್ಫ್ ಇಡೀ ದೇಶಕ್ಕೆ ಕ್ಯಾನ್ಸರ್ ಇದ್ದಂತೆ: ಗುಡುಗಿದ ಯತ್ನಾಳ್…!

0
69

ಬೆಳಗಾವಿ: ವಕ್ಪ್ ಮಂಡಳಿ ಇಡೀ ದೇಶದ ಕ್ಯಾನ್ಸರ್ ಇದ್ದಂತೆ. ಜಮೀರ್ ಅಹಮ್ಮದ್ ಖಾನ್ ಹಚ್ಚಿದ ಬೆಂಕಿ ಇದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಕ್ಫ್ ಆಸ್ತಿ 1.15 ಲಕ್ಷ ಎಕರೆ ಎಂದಿದ್ದ ಭೂಪ ಜಮೀರ್ ಅಹಮ್ಮದ್, ಈಗ 6 ಲಕ್ಷ ಎಕರೆ ಹಕ್ಕು ಮಂಡಿಸುತ್ತಿದ್ದಾನೆ ಎಂದು ಕುಟುಕಿದರು.
ವಕ್ಪ್ ವಿರುದ್ಧ ನಾವು ಜನ ಜಾಗೃತಿಯನ್ನು ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ ಈಗ ಕಿತ್ತೂರು ಕರ್ನಾಟಕ ಪ್ರವೇಶ ಮಾಡಿದ್ದೇವೆ. ನಾಳೆ ನಾವೆಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ ಎಂದು ಯತ್ನಾಳ್ ಹೇಳಿದರು.
ಇಲ್ಲಿಯವರೆಗೆ ಮಠ, ಮಂದಿರಗಳ ಆಸ್ತಿ ವಕ್ಪ್ ಎಂದು ಆಗಿದೆ. ಈ ಬಗ್ಗೆ ವರದಿ ಕೊಡಲು ನಾಳೆ ದೆಹಲಿಗೆ ಹೊರಟಿದ್ದು, ಅಲ್ಲಿ ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಸಂಪೂರ್ಣ ವರದಿ ಕೊಡುತ್ತೇವೆ ಎಂದರು.
ವಕ್ಫ್ ವರದಿ ಕೊಡುವುದಕಷ್ಟೇ ಮಾತ್ರ ನಮ್ಮ ಪ್ರವಾಸ. ಬೇರೆ ಬೇರೆ ವಿಮಾನದಲ್ಲಿ ನಾವು ದೆಹಲಿಗೆ ಹೋಗುತ್ತಿದ್ದೇವೆ. ಇದರರ್ಥ ತಂಡದಲ್ಲಿ ಒಡಕು ಇದೇ ಎಂಬುದಲ್ಲ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ‌ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.