ವಕೀಲರ ಮೇಲೆ ಖಾಕಿ ಹಲ್ಲೆ: ಪ್ರತಿಭಟನೆ

0
15
ಬೆಳಗಾವಿ ವಕೀಲರು

ಬೆಳಗಾವಿ: ವಿಷಯವೊಂದಕ್ಕೆ ಸಂಬಂಧಿಸಿದಂತೆ ಟಿಳಕವಾಡಿ ಪೊಲೀಸರು ಮಹಿಳಾ ವಕೀಲರ ಮೇಲೆ ಹಲ್ಲೆ ಮಾಡಿದರೆನ್ನಲಾದ ಘಟನೆ ಇಂದು ನಡೆದಿದೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿಯೇ ಈ ಘಟನೆ ನಡೆದಿದ್ದು ತಪ್ಪಿತಸ್ಥ ರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ವಕೀಲರು ಆಗ್ರಹಿಸಿದ್ದಾರೆ. ಬೆಳಗಾವಿಯ ವಕೀಲರಾದ ಕಾಂಚನ ಗವಳಿ ಎಂಬುವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ವಕೀಲರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ ನೇತೃತ್ವದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಡಿಸಿಪಿ ಚಂದ್ರಶೇಖರ ಅವರೊಂದಿಗೆ ಚರ್ಚೆ ನಡೆಸಿದಾಗ ತಕ್ಷಣ ಸಂಬಂಧಿಸಿದವರನ್ನು ಅಮಾನತ್ ಮಾಡಬೇಕು. ಸಿಪಿಐ ಅವರನ್ನು ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು. ವಕೀಲರ ಪ್ರತಿಭಟನೆ ಈಗಲೂ ಪೊಲೀಸ್ ಆಯುಕ್ತರ ಕಚೇರಿ ಎದುರು ಮುಂದುವರೆದಿದೆ

Previous articleಬೆಂಗಳೂರು: ಬಸ್ಸಿನಲ್ಲಿ ಮಲಗಿದ್ದ 45 ವರ್ಷದ ಬಿಎಂಟಿಸಿ ಕಂಡಕ್ಟರ್ ಸಜೀವ ದಹನ
Next article5, 8ನೇ ತರಗತಿಯ ಬೋರ್ಡ್‌ ಪರೀಕ್ಷೆ ರದ್ದು: ಹೈಕೋರ್ಟ್‌ ಆದೇಶ