ಲೋಕಾಯುಕ್ತ ಬಲೆಗೆ ಹರಿಹರ ನಗರಸಭೆ ಸದಸ್ಯೆ

0
20

ದಾವಣಗೆರೆ: ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವಾಗ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರಸಭೆಯ ವಾರ್ಡ್‌ 5ರ ಸದಸ್ಯೆ ನಾಗರತ್ನ ಲೋಕಾಯುಕ್ತ ಬಲೆಗೆ ಬಿದ್ದವರು. ಅವರ ಪತಿ ಮಂಜುನಾಥ, ಪುತ್ರ ರೇವಂತ ಅವರನ್ನೂ ಲೋಕಾ ಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಮಹಮದ್ ಮಜರ್ ಅವರಿಂದ 20,000 ರೂ.,ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಾಮಗಾರಿಗಳ ಬಿಲ್‌ ಪಾಸ್‌ ಮಾಡಲು ಗುತ್ತಿಗೆದಾರರಿಗೆ ಲಂಚದ ಬೇಡಿಕೆ ಇಟ್ಟಿದ್ದ ಆರೋಪ ನಾಗರತ್ನ ಅವರ ಮೇಲಿದೆ. ‌‌ಇವರೊಂದಿಗೆ ಸೇರಿ ಕಾಮಗಾರಿಗಳ ಬಿಲ್‌ ಪಾಸ್‌ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಜಿನಿಯರ್‌ ಅಬ್ದುಲ್‌ ಹಮೀದ್‌ ಅವರನ್ನೂ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Previous articleಇತಿಹಾಸವೇ ಇಲ್ಲದವರು ಪರರ ಇತಿಹಾಸವನ್ನು ಅಳಿಸಲು ಹೊರಟಿದ್ದಾರೆ
Next articleವಿದ್ಯುತ್‌ ಅವಘಡಕ್ಕೆ ಹತ್ತು ಬೈಕ್ ಭಸ್ಮ