ಚಿಕ್ಕೋಡಿ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರಕುಳ ನೀಡಿದ ಸರಕಾರಿ ಶಾಲೆ ಶಿಕ್ಷಕ ಮಹ್ಮದಸಾಧಿಕ್ ಗೌಸಮೋಯಿದ್ದಿನ್ ಮೀಯಾಬೇಗ್ ಶಿಕ್ಷಕನನ್ನು ಚಿಕ್ಕೋಡಿ ಪ್ರಭಾರಿ ಡಿಡಿಪಿಐ ಬಿ.ಎ. ಮೇಕನಮರಡಿ ಅವರು ಅಮನಾತು ಮಾಡಿ ಆದೇಶ ಹೊರಡಿಸಿದ್ದಾರೆ. ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ್ ಕಿರಕುಳ ಮಾಡಿದ ಹಿನ್ನಲೆಯಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಡಿಡಿಪಿಐ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರಕುಳ ನೀಡಿದ ಸರಕಾರಿ ಶಾಲೆ ಶಿಕ್ಷಕನ್ನು ಪೋಲಿಸರು ನ್ಯಾಯಾಲಯಕ್ಕೆ ಹಾಜರು ಮಾಡಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


























