ಲಿಂಬಾವಳಿ ವರ್ತನೆ ಒಳ್ಳೆಯದಲ್ಲ: ಕುಮಾರಸ್ವಾಮಿ

0
52
ಕುಮಾರಸ್ವಾಮಿ

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಹಿಳೆಗೆ ಆವಾಜ್‌ ಹಾಕಿ, ನಾನೇನು ರೇಪ್‌ ಮಾಡಿದ್ನಾ ಎಂಬ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ ಹೆಣ್ಣು ಮಕ್ಕಳ ಮೇಲೆ ರೇಪ್ ಮಾಡಲ್ಲ. ಅವರ ನಡವಳಿಕೆನೇ ಬೇರೆ ಇದೆ‌ ಎಂದು ಲೇವಡಿ ಮಾಡಿದ್ದಾರೆ.
ಮಂಡ್ಯದ ನಾಗಮಂಗಲ ತಾಲೂಕಿನಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಜನಪ್ರತಿನಿಧಿ ಬಳಿ ಬಂದರೆ ಗೌರವ ಕೊಡಬೇಕು‌. ಅರ್ಜಿ ಕೊಡಲು ಬಂದ ಮಹಿಳೆ ಜತೆ ಅಗೌರವಿತವಾಗಿ ನಡೆದುಕೊಂಡು ಬೆದರಿಸಿದ್ದಾರೆ. ಇದು ಒಳ್ಳೆಯ ವರ್ತನೆಯಲ್ಲ ಎಂದು ಗರಂ ಆದರು.

Previous articleಇಂದು ಭಾರತ-ಪಾಕ್ ಸೆಣಸಾಟ
Next articleಕಾಂಗ್ರೆಸ್‌ ಕಾಲದ ಹಗರಣ ಬಯಲಿಗೆ: ಸಿ.ಟಿ. ರವಿ