ಲಾರಿ ಅಪಘಾತ, ಇಬ್ಬರ ಸಾವು

0
30

ರಾಮದುರ್ಗ: ತಾಲೂಕಿನ ಮುದಕವಿ ಗುಡ್ಡದ ತಿರುವಿನಲ್ಲಿ ಲಾರಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಅಪಘಾತದ ಮಾದರಿಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ ಎಂದು ಹಲಗತ್ತಿ ಗ್ರಾಮದ ಮೃತರ ಸಂಬಂಧಿ ತಿಮ್ಮಣ್ಣ ಬಾಲಪ್ಪ ಮುದಕವಿ ರಾಮದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಕ್ಕರೆ ಚೀಲ ತುಂಬಿದ ಲಾರಿ ಕುಳಗೇರಿ ಕ್ರಾಸ್‌ನಿಂದ ರಾಮದುರ್ಗ ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಅದರಲ್ಲಿ ಪ್ರಯಾಣಿಸುತ್ತಿದ್ದ ಹಲಗತ್ತಿ ಗ್ರಾಮದ ಬಾಲಪ್ಪ ತಿಮ್ಮಣ್ಣ ಮುದಕವಿ(೨೮) ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಯಲ್ಲವ್ವ ಉಮೇಶ ಹುಚ್ಚನ್ನವರ(೩೮) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಲಗತ್ತಿ ಗ್ರಾಮದ ಮಂಜುಳಾ ತಿಮ್ಮಣ್ಣ ಮುದಕವಿ(೪೭), ರುಕ್ಮವ್ವ ಖಾನಪ್ಪ ಗಿಡ್ಡನ್ನವರ(೬೮), ಗುತ್ತಿಗೋಳಿ ಹೊಸಕೋಟಿಯ ಉಮೇಶ ಯಂಕಪ್ಪ ಹುಚ್ಚನ್ನವರ(೪೫) ತೀವ್ರಗಾಯಗೊಂಡಿದ್ದು ರಾಮದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀಳಗಿಯ ಲಾರಿ ಚಾಲಕ ಗಾಯಗೊಂಡಿದ್ದಾನೆ.
ಲಾರಿ ಚಾಲಕ ಧನುಷ್ ಸೋಮಪ್ಪ ಚವ್ಹಾಣ ನಿರ್ಲಕ್ಷ್ಯದಿಂದ ವೇಗವಾಗಿ ವಾಹನ ಚಾಲನೆ ಮಾಡಿ ಹಲಗತ್ತಿ ಬಳಿ ತಗ್ಗು ಪ್ರದೇಶದಲ್ಲಿ ಲಾರಿ ಉರುಳಿಸಿದ್ದರಿಂದ ಈ ಘಟನೆ ನಡೆದಿದೆ.

Previous articleಪತಿಯಿಂದ ಮೋಸ, ಪತ್ನಿ ಹೋರಾಟ
Next articleನರ್ಸಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್