ರೌಡಿ ಶೀಟರ್ ಮನೆಗೆ ಪೊಲೀಸರಿಂದ ದಿಢೀರ್ ತಪಾಸಣೆ

0
15

ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 70 ರೌಡಿ ಶೀಟರ್‌ಗಳಿಗೆ ಸಂಬಂಧಿಸಿದಂತೆ ಎಂಟತ್ತು ಮನೆಗಳಿಗೆ ಸಿಪಿಐ ಈರಯ್ಯ ಮಠಪತಿ ನೇತೃತ್ವದೊಂದಿಗೆ ಪೊಲೀಸ್ ತಂಡ ಮಂಗಳವಾರ ನಸುಕಿನ ಜಾವ ದಿಢೀರ್ ತಪಾಸಣೆ ನಡೆಸಿದ ಕುರಿತು ವರದಿಯಾಗಿದೆ. ದಾಳಿಯ ವೇಳೆ ಅಕ್ರಮ ಆಯುಧಗಳ ಬಗ್ಗೆ ಶೋಧ ನಡೆಸಿ ಯಾವುದೇ ರೌಡಿ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.
ತಪಾಸಣೆಯ ವೇಳೆ ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆಯು ಆಗಾಗ್ಗೆ ಇಂತಹ ತಪಾಸಣೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಇದರಿಂದಾಗಿ ರೌಡಿಗಳ ಮೇಲೆ ನಿರಂತರ ನಿಗಾ ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದರು.

Previous articleಧಾರವಾಡ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ
Next articleಸಿಯಾಟಲ್ -ಫೋರ್ಟ್ಲ್ಯಾಂಡ್ ಸೈಕಲ್ ರ‍್ಯಾಲಿಯಲ್ಲಿ ಬಾಲಕಿಯ ಬೆರಗು