ಕೊಪ್ಪಳ: ತಾಲ್ಲೂಕಿನ ಜಬ್ಬಲಗುಡ್ಡ ಗ್ರಾಮದ ಹೊರವಲಯದ ರೈಲ್ವೆ ಹಳಿಯ ಮೇಲೆ ಅನುಮಾಸ್ಪದವಾಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಮೃತನನ್ನು ಗಂಗಾವತಿ ತಾಲೂಕಿನ ಬಸವಪಟ್ಟಣ ಗ್ರಾಮದ 5ನೇವಾರ್ಡಿನ ಸೈದಪ್ಪ(25) ಎಂದು ಗುರುತಿಸಲಾಗಿದೆ.
ಈ ಯುವಕ ಇಂದರಗಿ ತಾಂಡ ಸಮೀಪದ ದೊಡ್ಲ ಡೈರಿಯಲ್ಲಿ ಕೆಲಸ ಮಾಡುತ್ತಿದ್ದನು. ಭಾನುವಾರ ಕೆಲಸಕ್ಕೆ ತೆರಳಿದ್ದ ಸೈದಪ್ಪ ಮನೆಗೆ ಬಂದಿರಲಿಲ್ಲ. ಸೋಮವಾರ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಸೈದಪ್ಪನ ಸಾವು ಕೊಲೆ ಎಂದು ಕುಟುಂಬಸ್ಥರು ದೂರು ನೀಡಿದ್ದು, ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

























