ರೈಲಿನಲ್ಲಿ ಮುಸುಕುಧಾರಿಗಳ ದಾಳಿ: ಓರ್ವ ಸಾವು, ಹಲವರಿಗೆ ಗಾಯ

0
17

ಬೆಳಗಾವಿ: ಬೆಳಗಾವಿಯ ಲೋಂಡಾ ಬಳಿ ರೈಲು ಪ್ರಯಾಣಿಕರ ಮೇಲೆ ಮುಸುಕುದಾರಿಗಳ ತಂಡವೊಂದು ಕ್ರೌರ್ಯ ಮೆರೆದು ಚಾಕುವಿನಿಂದ ಇರಿದ ಘಟನೆ ನಡೆದಿದ್ದು ಓರ್ವ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ರೈಲ್ವೆ ಇಲಾಖೆಯ ಟಿಸಿ ಸೇರಿದಂತೆ ಮೂವರಿಗೆ ತೀವ್ರ ಗಾಯಗಳಾಗಿದ್ದು ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆ ನಡೆಸಿದವರು ರೈಲಿನಿಂದ ಹಾರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪಾಂಡಿಚೇರಿ-ಮುಂಬೈ ಮಧ್ಯೆ ಸಂಚರಿಸುವ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ.

Previous articleಸಿಡಿಲಿಗೆ ಓರ್ವ ಯುವಕ ಬಲಿ
Next articleಶುಗರ್‌ ಸೇರಿದಂತೆ 41 ಅಗತ್ಯ ಔಷಧಗಳ ಬೆಲೆ ಇಳಿಸಿದ ಕೇಂದ್ರ