ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಿಂದ ಮೂವರು ರಿಲೀಸ್

0
25

ತುಮಕೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ರಿಲೀಸ್ ಆಗಿದ್ದಾರೆ.
ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಆರೋಪಿ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಜೈಲಿನಿಂದ ರಿಲೀಸ್ ಆಗಿದ್ದು, ಸೆಪ್ಟೆಂಬರ್ 23 ರಂದು ಜಾಮೀನು ಸಿಕ್ಕಿತ್ತು ಆದರೆ ಜಾಮೀನಿಗೆ ಶ್ಯೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಡಿದ್ದರು. ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ಇರುವದರಿಂದ ವಿಳಂಭವಾಗಿಯತ್ತು, ನಿನ್ನೆ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡು, ರಾತ್ರಿಯೇ ತುಮಕೂರು ಜೈಲಾಧಿಕಾರಿಗೆ ಜಾಮೀನು ಆದೇಶ ಪ್ರತಿಯನ್ನು ಮೇಳ್ ಮಾಡಲಾಗಿತ್ತು. ಇಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ ಮೂವರು ಆರೋಪಿಗಳನ್ನ ಜೈಲಿನಿಂದ ರಿಲೀಸ್ ಮಾಡಲಾಗಿದೆ.

Previous articleಗಾಂಧೀಜಿ ಎಲ್ಲರಿಗೂ ಮಾದರಿ
Next articleಮಕ್ಕಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ