ರೇಣುಕಾಸ್ವಾಮಿ ಕುಟುಂಬ ಗೋಕರ್ಣಕ್ಕೆ ಭೆಟ್ಟಿ

0
34

ಗೋಕರ್ಣ: ಮಗನಿಗೆ ಮೋಕ್ಷ ಸಿಗಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು. ತನ್ನ ಸೊಸೆಗೆ ಸಹನಾಗೆ ನೌಕರಿ ಸಿಗಬೇಕು' ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥ ಶಿವನಗೌಡರ್ ಮತ್ತೆ ಕಳಕಳಿ ವ್ಯಕ್ತಪಡಿಸಿದ್ದು ಬುಧವಾರ ಇಲ್ಲಿ ಭಾವುಕರಾದರು. ಕಾನೂನಿನ ಬಗ್ಗೆ ನಂಬಿಕೆಯಿದೆ. ಆದರೆ, ಈಚೆಗಿನ ಬೆಳವಣಿಗೆಗಳು ಅರ್ಥವೇ ಆಗುತ್ತಿಲ್ಲ’ ಎಂದು ಪುಟ್ಟ ಮಗು, ವೃದ್ಧ ಅತ್ತೆ-ಮಾವ-ಅತ್ತಿಗೆ ಜೊತೆ ರೇಣುಕಾಸ್ವಾಮಿ ಪತ್ನಿ ಸಹನಾ ಬುಧವಾರ ಆಗಮಿಸಿದ ವೇಳೆ ಅವರ ಮಾವ ಪತ್ರಿಕೆಯೊಂದಿಗೆ ಮಾತನಾಡಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನೌಕರಿ ವಿಷಯವಾಗಿ ಸಲ್ಲಿಸಿದ ಅರ್ಜಿಯನ್ನು ಮರುಪರಿಶೀಲನೆಗೆ ಒಳಪಡಿಸಿ ಉದ್ಯೋಗ ದೊರಕಿಸಿಕೊಡಬೇಕು’ ಎಂದು ಅವರು ಮನವಿ ಮಾಡಿದರು. `ಮಗನ ಸಾವಿನ ವರ್ಷದ ಒಳಗೆ ಗೋಕರ್ಣಕ್ಕೆ ಹೋಗುವಂತೆ ಹಿರಿಯರು ಹೇಳಿದ್ದರು. ಅದರ ಪ್ರಕಾರ ಇಲ್ಲಿಗೆ ಬಂದಿದ್ದೇವೆ’ ಎನ್ನುತ್ತ ಕಣ್ಣೀರಿಟ್ಟರು. ಸಹನಾರವರು ತೀರ ಬೇಸರದಲ್ಲಿರುವುದು ಕಂಡುಬಂತು.
ನಟ ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೆಜ್ ಮಾಡಿದ್ದರು. ಹೀಗಾಗಿ ದರ್ಶನ್ ಅವರ ತಂಡದವರು ರೇಣುಕಾಸ್ವಾಮಿಯನ್ನು ಶೆಡ್ಡಿನಲ್ಲಿ ಕೂಡಿಹಾಕಿ ಕೊಲೆ ಮಾಡಿದ್ದರು. ೨೦೨೪ರ ಜೂನ್ ೯ರಂದು ಬೆಂಗಳೂರಿನ ಸುಮೇನಳ್ಳಿ ಸೇತುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸಿದ್ದರು. ಸದ್ಯ ದರ್ಶನ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.ಇನ್ನೂ, ರೇಣುಕಾಸ್ವಾಮಿ ಕೊಲೆಯಾದಾಗ ಸಹನಾ ೫ ತಿಂಗಳ ಗರ್ಭಿಣಿಯಾಗಿದ್ದರು. ನಂತರ ಅವರಿಗೆ ಜನಿಸಿದ ಮಗುವಿಗೆ ಶಶಿಧರ್ ಎಂದು ನಾಮಕರಣ ಮಾಡಲಾಗಿದೆ. ಆ ಮಗುವಿನ ಜೊತೆ ಮಾವ ಕಾಶಿನಾಥ ಶಿವನಗೌಡರ್, ಅತ್ತೆ ರತ್ನಪ್ರಭಾ ಹಾಗೂ ಅತ್ತಿಗೆ ಸುಚಿತ್ರಾ, ದೊಡ್ಡ ಮಾವ ಪರಮಾನಂದಯ್ಯ ಜೊತೆಗಿದ್ದರು.

ದೇವಾಲಯಕ್ಕೆ ಭೇಟಿ:
ವೀರಶೈವ ಮಠಕ್ಕೆ ಆಗಮಿಸಿ ವಿಶ್ರಾಂತಿ ಪಡೆದ ನಂತರ ಮಹಾಗಣಪತಿ, ಮಹಾಬಲೇಶ್ವರ, ತಾಮ್ರಗೌರಿ ಹಾಗೂ ಉಳಿದ ಪ್ರಮುಖ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಮಾಡಿದರು. ಮಠದ ಬಸಯ್ಯ, ಯಾತ್ರಾ ನಿವಾಸದ ನಿರ್ವಾಹಕ ಗಣಪತಿ ನಾಯ್ಕ, ಗಂಗಾವಳಿ ಗಣಪತಿ ನಾಯ್ಕ ಮತ್ತಿತರು ಜೊತೆಗಿದ್ದು ಸಹಕರಿಸಿದರು.
ಅವರು ಅಲ್ಲಿನ ಬಸಯ್ಯ ಅವರನ್ನು ಭೇಟಿ ಮಾಡಿದರು. ಯಾತ್ರಾ ನಿವಾಸ ನಿರ್ವಾಹಕ ಗಣಪತಿ ನಾಯ್ಕರವರ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Previous article92 ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವ್ಯಾಪಕ ನೆಗಡಿ-ಜ್ವರ
Next articleಮುಡಾ ದಾಖಲೆ ಕೊಟ್ಟಿದ್ದು ಕಾಂಗ್ರೆಸ್