ರೆಡ್ಡಿ ‌ರಾಮುಲು‌ ಜೋಡಿ‌ ಮೋಡಿ‌ ಮಾಡಲಿದೆ

0
24

ಬಳ್ಳಾರಿ: ಮೂರು ವಿಧಾನ ಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರ ಮಾಡ್ತಿದ್ದೇನೆ. ಸಂಡೂರಿನಲ್ಲಿ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದ್ದು, ಜನಾರ್ದನ ರೆಡ್ಡಿ- ಶ್ರೀರಾಮುಲು ಜೋಡಿ ಅಭ್ಯರ್ಥಿಗೆ ಹೆಚ್ಚು ಶಕ್ತಿ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದರು.
ಸಂಡೂರಿನ ಚೋರನೂರು‌ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಪ್ರಚಾರದ ವೇಳೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ, ನಾಳೆಯೂ ನಾನು ಸಂಡೂರಿನಲ್ಲೇ ಇರ್ತಿನಿ ಮೋದಿಯವರ ವರ್ಚಸ್ಸು ನಮಗೆ ಅನುಕೂಲವಾಗಲಿದೆ.
ಸಂಸದ ತೇಜಸ್ವಿ ಸೂರ್ಯ ಅವರ ಮೇಲೆ FIR ಆಗಿದೆ, ಆಗಲಿ ಬಿಡಿ ಎದುರಿಸೋಣ ಎಂದರು. ಸಿಎಂ ಸಿದ್ದರಾಮಯ್ಯ ‌ ಸೇರಿ, ಕ್ಯಾಬಿನೆಟ್ ಇಲ್ಲೇ ಇದೆ ಎಂಬ ವಿಚಾರ ಅದನ್ನು ನೀವೇ ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಗೆ ಸೋಲುವ ಭೀತಿ ಬಂದಿದೆ.‌ಮುಡಾ ಹಗರಣದಲ್ಲಿ ಸಿಎಂ ಸಿಲುಕಿ ಒದ್ದಾಡ್ತಿದ್ದಾರೆ. 15-20 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ.

ಮುಡಾ ಹಗರಣ ಆರೋಪ ಸಾಬಿತಾಗ್ತದೆ ಅಂತ ED, CBI ಮೇಲೆ ಸಿಎಂ ಸಿದ್ದರಾಮಯ್ಯ ಅಪಪ್ರಚಾರ ಮಾಡ್ತಿದಾರೆ. CBI FIR ಮಾಡಬೇಕು, ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ವಕ್ಪ್ ಬೋರ್ಡ್ ವಿಚಾರದಲ್ಲಿ ಜಂಟಿ ಸದನ ಸಮಿತಿ ತನ್ನ ಕೆಲಸ ಮಾಡ್ತಿದೆ ವಕ್ಪ್ , ಮುಡಾ ವಿಚಾರದಲ್ಲಿ ಅವರಿಗೆ ಆರೋಪ ಸಾಬಿತಾಗುತ್ತದೆ , ಅವರಿಗೆ ಭಯ ಶುರುವಾಗಿದೆ ಎಂದರು.

Previous articleಮಂಗಳೂರು-ಪುಣೆ ನೇರ ವಿಮಾನ ಪುನರ್ ಆರಂಭಿಸುವಂತೆ ಮನವಿ
Next articleಅಡ್ಜಸ್ಟಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್