ಕಲಬುರಗಿ: ನಗರದಲ್ಲಿ ರಿಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ನಗರದ ಹುಮನಾಬಾದ್ ರಿಂಗ್ ರೋಡ್ ನಲ್ಲಿ ಯುವಕನನ್ನು ಕೊಲೆ ಮಾಡ್ತಿರೋ ರಿಲ್ಸ್ ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ತಡರಾತ್ರಿ ಇಬ್ಬರು ಯುವಕರು ರಿಲ್ಸ್ ಮಾಡೋ ಭರದಲ್ಲಿ ಹುಚ್ವಾಟ ಪ್ರದರ್ಶಿಸಿದ್ದಾರೆ. ಯುವಕನ ಮೇಲೆ ಮತ್ತೋರ್ವ ಯುವಕ ಕುಳಿತು ಸುತ್ತಿಗೆಯಿಂದ ಹೊಡೆಯುತ್ತಿರೋ ದೃಶ್ಯ ಸಾರ್ವಜನಿಕ ವಲಯದಲ್ಲಿ ಭಯ ಹುಟ್ಟಿಸುವ ರೀತಿ ಚಿತ್ರೀಕರಿಸಲಾಗಿದ್ದು, ರಾತೋರಾತ್ರಿ ಈ ರಿಲ್ಸ್ ವಿಡಿಯೋ ವೈರಲ್ ಆಗಿದರಿಂದ ಕಲಬುರಗಿ ಜನ ಅಕ್ಷರಶಃ ಬೆಚ್ಚಿಬಿದ್ದಾರೆ.
ತಕ್ಷಣ ಸತ್ಯಾಸತ್ಯತೆ ತಿಳಿಯಲು ಮುಂದಾದ ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು, ಇದು ಕೊಲೆಯಲ್ಲ. ಯುವಕರು ರಿಲ್ಸ್ ಮಾಡಿರೋದಾಗಿ ಪತ್ತೆ ಹಚ್ಚಿದ್ದಾರೆ. ಇನ್ನು ಇಬ್ಬರ ಯುವಕರ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.