Home Advertisement
Home ತಾಜಾ ಸುದ್ದಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ

ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ

0
119

ಬಳ್ಳಾರಿ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಇಂದು ಬಳ್ಳಾರಿ ನಗರ ಮತ್ತು ಗ್ರಾಮೀಣ ಅಭ್ಯರ್ಥಿಗಳ ಪರ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ನಗರದ ಬೆಳಗಲ್ ಕ್ರಾಸ್ ನಿಂದ ರೋಡ್ ಶೋ ಆರಂಭಿಸಿದ ರಾಹುಲ್ ಬೆಳಗಲ್ಲು ರಸ್ತೆ, ಕೌಲ್ ಬಜಾರ್ ಮೂಲಕ ಸಾಗಿದರು. ದಾರಿ ಉದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ರಾಹುಲ್ ಗಾಂಧಿ ಅಭಿಮಾನಿಗಳು ಭಾರಿ ಹುರುಪಿನಿಂದ ಸ್ವಾಗತ ಮಾಡಿದರು. ರಾಹುಲ್ ಗಾಂಧಿ ಪರ ಘೋಷಣೆ ಕೂಗಿದರು.
ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ ರಾಹುಲ ಗಾಂಧಿ ಪಕ್ಕದಲ್ಲಿ ನಿಂತು ದಾರಿ ಉದ್ದಕ್ಕೂ ಎರಡೂ ಕಡೆ ನಿಂತಿದ್ದ ಮತದಾರರಲ್ಲಿ ಕೈ ಮುಗಿದು ಮತ ಯಾಚನೆ ಮಾಡಿದರು. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇರಿದಂತೆ ಇತರೆ ಮುಖಂಡರು ರಾಹುಲ್ ಜೊತೆಗಿದ್ದರು.