ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕೋಡಳ್ಳಿ ಶಿವರಾಮ್ ನಿಧನರಾಗಿದ್ದಾರೆ.
ಬೆಂಗಳೂರಿನ ಹನಮಂತನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೆ ರಾಜಕೀಯ ಸಲಹೆಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ರಾಮಕೃಷ್ಣ ಹೆಗಡೆ ಅವರಿಗೆ ಶಿವರಾಮ್ ಅವರು ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವಿವಾಹಿತಾಗಿದ್ದ ಅವರು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದು 1981ರಲ್ಲಿ ಬಿಡುಗಡೆಯಾದ ಗ್ರಹಣ ಚಲನಚಿತ್ರಕ್ಕೆ ಶಿವರಾಮ್ ಅವರು ಕತೆ ಬರೆದಿದ್ದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭ್ಯವಾಗಿತ್ತು. ಅಲ್ಲದೆ, ಬೆಳ್ಳಿ ಬೆಳಕು ಸೇರಿದಂತೆ ಇತರೆ ಚಿತ್ರಗಳನ್ನು ಅವರು ಕೆಲಸ ಮಾಡಿದ್ದರು. ಅವರಿಗೆ ರಾಜ್ಯ ಹಾಗೂ ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಕೂಡ ಸಿಕ್ಕಿವೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲೂ ಅವರು ಇದ್ದರು.