ರಾಮುಲು ಆಸ್ತಿ ಪ್ರಮಾಣ ಶೇ. ೯೧ರಷ್ಟು ಹೆಚ್ಚಳ

0
20
ರಾಮುಲು

ಬಳ್ಳಾರಿ: ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಆಸ್ತಿ ಕಳೆದ ಐದು ವರ್ಷದ ಅವಧಿಯಲ್ಲಿ ಶೇ. ೯೧ರಷ್ಟು ಹೆಚ್ಚಳ ಆಗಿದೆ.
ಇಂದು ನಾಮಪತ್ರ ಸಲ್ಲಿಸುವ ವೇಳೆ ನೀಡಿರುವ ದಾಖಲೆ ಪ್ರಕಾರ ರಾಮುಲು ಒಟ್ಟು ೪೬ ಕೋಟಿ ರೂ. ಆಸ್ತಿ ಹೊಂದಿದ್ದಾರೆ.
೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದಾಗ ಅವರು ತಮ್ಮ ಶಪಥ ಪತ್ರದಲ್ಲಿ ೨೪ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾಗಿ ಹೇಳಿಕೊಂಡಿದ್ದರು. ಅಲ್ಲಿಗೆ ಕಳೆದ ಐದು ವರ್ಷದ ಅವಧಿಯಲ್ಲಿ ರಾಮುಲು ಅವರ ಆಸ್ತಿ ಶೇ. ೯೧ರಷ್ಟು ಹೆಚ್ಚಳ ಕಂಡಂತೆ ಆಗಿದೆ.
ಕಳೆದ ಚುನಾವಣೆ ಸಂದರ್ಭದಲ್ಲಿ ೪೨ ಲಕ್ಷ ರೂ. ಸಾಲ ತೋರಿಸಿದ್ದರು. ಈ ಬಾರಿ ೫ ಕೋಟಿ ರೂ. ಸಾಲ ಹೊಂದಿದ್ದಾರೆ ಎಂದು ಶಪಥ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟು ಆಸ್ತಿ ಪೈಕಿ 6 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಚರಾಸ್ತಿಯಲ್ಲಿ ಬಿಎಂಡಬ್ಲು, ಮರ್ಸಿಡಿಸ್ ಬೆಂಚ್ ಕಾರ್ ಹೊಂದಿರುವುದಾಗಿ ತಿಳಿಸಿದ್ದಾರೆ.
ಹೆಂಡತಿ ಭಾಗ್ಯಮ್ಮ ಹೆಸರಲ್ಲಿ ೨೦ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ೧.೩ ಕೋಟಿ ರೂ.ನ ಚರಾಸ್ತಿ ಹೊಂದಿದ್ದಾಗಿ ತಿಳಿಸಿದ್ದಾರೆ.

Previous articleಮಹಿಳಾ ಸಬಲೀಕರಣಕ್ಕಾಗಿ ಕಣಕ್ಕಿಳಿದ ಶೆಟ್ರ ಮಗಳು
Next articleಕಾಂಗ್ರೆಸ್ ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ