ರಾಜ್ಯ ಮಕ್ಕಳ ಆಯೋಗದ ಸದಸ್ಯ ಕೋಸಂಬೆ ವಿಮ್ಸ್‌ಗೆ ದಿಢೀರ್ ‌ಭೇಟಿ

0
20

ಬಳ್ಳಾರಿ: ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳ ಅಪೌಷ್ಟಿಕ ಪುನಃಶ್ಚೇತನ ಘಟಕ, ಕಾಂಗೋ ಮದರ ಕೇರ್ ಹಾಗೂ ಮಕ್ಕಳ ತುರ್ತು ನಿಗಾ ಘಟಕ, ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಹಾಗೂ ೧೦೦ ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನವಜಾತ ಶಿಶುಗಳಿಗೆ ಹಾಗೂ ತಾಯಂದಿರುಗಳಿಗೆ ಯಾವುದೇ ನ್ಯೂನತೆಗಳ ಉಂಟಾಗದಂತೆ ನಿಗಾವಹಿಸಬೇಕು ಎಂದು ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ನ್ಯೂನತೆಗಳಿದ್ದವು. ಅವುಗಳನ್ನು ಸರಿ ಪಡಿಸಲು ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿತ್ತು. ಈಗ ಭೇಟಿ ನೀಡಿ ಪರಿಶೀಲಿಸಿದಾಗ ಬಹಳಷ್ಟು ಸುಧಾರಣೆ ಆಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ೪೩೦ ತ್ರೀವ ಅಪೌಷ್ಟಿಕ ಮಕ್ಕಳು ಇದ್ದಾರೆ. ಮಕ್ಕಳ ಅಪೌಷ್ಟಿಕ ಪುನಃಶ್ಚೇತನ ಘಟಕದಲ್ಲಿ ಯಾವ ಅಪೌಷ್ಟಿಕ ಮಕ್ಕಳ ಸಹ ದಾಖಲಾಗಿಲ್ಲ. ಹೊರ ಜಿಲ್ಲೆಯ ಮಕ್ಕಳ ದಾಖಲಾಗಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸ ನೀಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಸಂಬಂಧಪಟ್ಟ ಆರೋಗ್ಯ ಅಕಾರಿಗಳು ಅಪೌಷ್ಠಿಕತೆ ನಿರ್ಮೂಲನೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾಶಸ್ತ್ರ ಚಿಕಿತ್ಸಕ ಬಸರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಕಾರಿ ಜಲಾಲಪ್ಪ, ಶಿಶು ಅಭಿವೃದ್ಧಿ ಯೋಜನಾಕಾರಿ ನಾಗರಾಜ್, ಕಾನೂನು ಪರಿವೀಕ್ಷಣಾಕಾರಿ ಈಶ್ವರ ರಾವ್, ಚೆನ್ನಬಸಪ್ಪ, ಮಕ್ಕಳ ಸಹಾಯವಾಣಿ ಸಂಯೋಜನಾಕಾರಿ ಮಂಜುನಾಥ್ ಇತರರಿದ್ದರು.

Previous articleವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿರೋದು ನಿಜ
Next articleಆರು ವರ್ಷದ ಬಳಿಕ ಕುಟುಂಬದ ಮಡಿಲು ಸೇರಿದ ಮಗ