Home Advertisement
Home ನಮ್ಮ ಜಿಲ್ಲೆ ಗದಗ ರಾಜ್ಯದಲ್ಲಿ ಶೀಘ್ರ ಜಿಪಂ, ತಾಪಂ ಚುನಾವಣೆ

ರಾಜ್ಯದಲ್ಲಿ ಶೀಘ್ರ ಜಿಪಂ, ತಾಪಂ ಚುನಾವಣೆ

0
65

ಗದಗ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯದೇ ಇರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಾನೂನಾತ್ಮಕವಾಗಿ ಚುನಾವಣೆ ಮಾಡಬೇಕಾಗಿದೆ. ಈ ಬಗ್ಗೆ ಈಗಾಗಲೇ ಉಚ್ಛ ನ್ಯಾಯಾಲಯ ಶೀಘ್ರ ಚುನಾವಣೆ ನಡೆಸುವಂತೆ ಹೇಳಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮಾಡುವುದಕ್ಕೆ ಹೆಜ್ಜೆ ಇಡುತ್ತೇವೆ. ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ ಮೀಸಲಾತಿ ಕುರಿತು ಸಾಕಷ್ಟು ಚರ್ಚೆಯಾಗಿದೆ. ಆದಷ್ಟು ಬೇಗ ಮೀಸಲಾತಿ ಘೋಷಿಸಿ ಚುನಾವಣೆ ನಡೆಸಲಾಗುವದು ಎಂದರು.

Previous articleದೇವರಲ್ಲಿ ಭಕ್ತಿ ಎಷ್ಟು ಮುಖ್ಯವೋ ದೇಶ ಭಕ್ತಿಯೂ ಅಷ್ಟೇ ಮುಖ್ಯ
Next articleಗ್ಯಾರಂಟಿ ನಿಲ್ಲಲ್ಲ